×
Ad

ರಜೆಯಲ್ಲಿ ತೆರಳಿದ ಬಿಹಾರದ ಐಎಎಸ್ ಅಧಿಕಾರಿ

Update: 2016-09-10 23:53 IST

ಪಾಟ್ನಾ, ಸೆ.10: ಬಿಹಾರದ ಅಬಕಾರಿ ಮತ್ತು ನಿಷೇಧ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಪಾಠಕ್ ಅವರು ದಿಢೀರನೆ ರಜೆಯ ಮೇಲೆ ತೆರಳಿದ್ದಾರೆ. ಆಡಳಿತ ಜೆಡಿಯು ನಾಯಕನೋರ್ವನ ಮನೆಯಲ್ಲಿ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮವನ್ನು ಕೈಗೊಂಡಿದ್ದಕ್ಕಾಗಿ ತನ್ನ ಇಲಾಖೆಯ ಸಬ್ ಇನ್‌ಸ್ಪೆಕ್ಟರ್‌ವೋರ್ವನನ್ನು ಬಂಧಿಸಿರುವುದಕ್ಕಾಗಿ ಪಾಠಕ್ ಅಸಮಾಧಾನಗೊಂಡಿದ್ದಾರೆಂಬ ವರದಿಗಳ ನಡುವೆಯೇ ಅವರ ಈ ನಡೆ ಕುತೂಹಲವನ್ನು ಮೂಡಿಸಿದೆ.

ತನ್ನ ಸ್ಥಾನದಲ್ಲಿ ಬೇರೊಬ್ಬರನ್ನು ನಿಯೋಜಿಸುವಂತೆ ತಾನು ಸರಕಾರವನ್ನು ಕೋರಿರುವುದಾಗಿ ಕಳೆದ ಬುಧವಾರದಿಂದಲೂ ಕರ್ತವ್ಯಕ್ಕೆ ಗೈರುಹಾಜರಾಗಿರುವ ಪಾಠಕ್ ಸುದ್ದಿಸಂಸ್ಥೆಗೆ ತಿಳಿಸಿದರು.

ಸಬ್ ಇನ್‌ಸ್ಪೆಕ್ಟರ್ ಬಂಧನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದೊಂದು ಅನ್ಯಾಯದ ಕ್ರಮವಾಗಿದೆ. ಅದು ನಿದರ್ಶನವೊಂದಕ್ಕೆ ನಾಂದಿ ಹಾಡಲಿದೆ ಎಂದರು.

1990ರ ತಂಡದ ಐಎಎಸ್ ಅಧಿಕಾರಿಯಾಗಿರುವ ಪಾಠಕ್ ಈ ವರ್ಷದ ಎಪ್ರಿಲ್‌ನಿಂದ ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧವನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News