×
Ad

ಜೆಎನ್‌ಯು ಚುನಾವಣೆ: ನಾಲ್ಕು ಸ್ಥಾನಗಳೂ ಎಡರಂಗಕ್ಕೆ

Update: 2016-09-10 23:56 IST

ಹೊಸದಿಲ್ಲಿ,ಸೆ.10: ಇಲ್ಲಿಯ ಜೆಎನ್‌ಯು ವಿವಿಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆದುಕ್ಕೊಳ್ಳುವ ಮೂಲಕ ಎಐಎಸ್‌ಎ-ಎಸ್‌ಎಫ್‌ಐ ಮೇಲುಗೈ ಸಾಧಿಸಿದೆ.

ಎಐಎಸ್‌ಎ-ಎಸ್‌ಎಫ್‌ಐ ಕೂಟ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಮೂಲಕ ಎಬಿವಿಪಿ ಮತ್ತು ಎನ್‌ಎಸ್‌ಯುಐ ತೀವ್ರ ಮುಖಭಂಗವನ್ನು ಅನುಭವಿಸಿದೆ.
 ಸಿಪಿಎಂ ಬೆಂಬಲಿತ ಎಸ್‌ಎಫ್‌ಐ ಮತ್ತು ಸಿಪಿಐ-ಎಂಎಲ್ ಬೆಂಬಲಿತ ಎಐಎಸ್‌ಎ ಜಂಟಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿಪಿಐ ಬೆಂಬಲಿತ ಎಐಎಸ್‌ಎಫ್‌ನ ಕನ್ಹಯ್ಯಾ ಕುಮಾರ್ ಬಂಧನದ ಬಳಿಕ ಇದು ಕ್ಯಾಂಪಸ್‌ನಲ್ಲಿ ನಡೆದ ಮೊದಲ ಚುನಾವಣೆಯಾಗಿದೆ. ಸದ್ಯದ ರಾಜಕೀಯ ಸಂದರ್ಭದಲ್ಲಿ ಈ ಚುನಾವಣಾ ಫಲಿತಾಂಶ ಸಂಘ ಪರಿವಾರ ಮತ್ತು ಎಬಿವಿಪಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಈ ಚುನಾವಣಾ ಫಲಿತಾಂಶ ದೇಶದಲ್ಲಿ ನಿಜವಾದ ದೇಶಪ್ರೇಮಿಗಳು ಯಾರು ಎನ್ನುವುದನ್ನು ಹೊರಗೆಡಹಿದೆ ಎಂದು ಎಡರಂಗದ ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News