×
Ad

ರಾಜಸ್ಥಾನದಲ್ಲಿ ಎಷ್ಟು ಯಹೂದಿಗಳು ಇದ್ದಾರೆ ಗೊತ್ತೇ?

Update: 2016-09-11 12:04 IST

ಜೈಪುರ,ಸೆ.11: ರಾಜಸ್ಥಾನದ 6.85 ಕೋಟಿ ಜನಸಂಖ್ಯೆಯಲ್ಲಿ ಒಬ್ಬನೇ ಒಬ್ಬ ಯಹೂದಿ ಇದ್ದಾನೆ. 85 ಮಂದಿ ಪಾರ್ಸಿಗಳು ಇದ್ದಾರೆ. ವಿವಿಧ ಧರ್ಮೀಯರ ಕುರಿತು ಹೊರಡಿಸಿದ ವರದಿಯಲ್ಲಿ ಈ ಅಂಕಿ ಸಂಖ್ಯೆಗಳನ್ನು ವಿವರಿಸಲಾಗಿದೆ. ಶತಮಾನಗಳ ಹಿಂದೆ ಬ್ರಿಟಿಷ್ ಆಡಳಿತದ ಕಾಲದಲ್ಲಿ ರಾಜಸ್ಥಾನಕ್ಕೆ ಪಾರ್ಸಿಗಳು ಬಂದಿದ್ದರು. ಇದೀಗ ಅಲ್ಲಿನ ಪಾರ್ಸಿಗಳು ವಂಶನಾಶದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ವಸಾಹತು ಶಾಹಿ ಆಡಳಿತಕಾಲದಲ್ಲಿ ಅಜ್ಮೀರ್, ಮೆರ್ವಾರದಲ್ಲಿ ಪಾರ್ಸಿಗಳು ಹೆಚ್ಚಿನ ಸಂಖ್ಯೆಯಲ್ಲಿವಾಸವಾಗಿದ್ದರು.

 ಪ್ರಕೃತಿ ಧರ್ಮಗಳ ಅನುಯಾಯಿಗಳು ಎನ್ನಲಾದ ಐವತ್ತು ಮಂದಿಕೂಡಾ ರಾಜಸ್ಥಾನದಲ್ಲಿದ್ದಾರೆ. ಅಮೆರಿಕ ಸ್ಥಳೀಯ ಪರಂಪರೆಯೊಂದನ್ನು ಇವರು ಅನುಸರಿಸುತ್ತಿದ್ದಾರೆ. ಆದರೆ ಇವರಲ್ಲಿ ಯಾರನ್ನೂ ಕಂಡುಹುಡುಕಲು ಸಾಧ್ಯವಾಗಿಲ್ಲ. 1948ರಲ್ಲಿ ಇಸ್ರೇಲ್ ಸ್ಥಾಪನೆಯಾಗುವ ಮೊದಲೇ ಅಜ್ಮೀರ್‌ನ ಪುಷ್ಕರ್ ಶ್ರೀಮಂತ ಯಹೂದಿ ಪರಂಪರೆ ಇದ್ದ ಪ್ರದೇಶವಾಗಿತ್ತು. ಇಲ್ಲಿಗೆ ಯಹೂದಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News