ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ‘ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7’ಗೆ ನಿಷೇಧ

Update: 2016-09-11 16:29 GMT

ಸಿಂಗಾಪುರ, ಸೆ.11: ಕೆಲವು ಫೋನ್‌ಗಳಲ್ಲಿ ಬ್ಯಾಟರಿಗಳು ಸ್ಫೋಟಗೊಂಡಿವೆಯೆಂಬ ವರದಿಗಳ ಹಿನ್ನೆಲೆಯಲ್ಲಿ ‘ಸ್ಯಾಮ್‌ಸುಂಗ್ ಗ್ಯಾಲಕ್ಸಿ ನೋಟ್ 7’ ಮೊಬೈಲ್ ಫೋನ್‌ನ ಬಳಕೆಯನ್ನು ನಿಷೇಧಿಸಿರುವ ವಿಮಾನಯಾನ ಸಂಸ್ಥೆಗಳ ಸಾಲಿಗೆ ಇದೀಗ ಸಿಂಗಾಪುರ ಏರ್‌ಲೈನ್ಸ್ ಕೂಡಾ ಸೇರ್ಪಡೆಗೊಂಡಿದೆ.

‘ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7’ ಮೊಬೈಲ್‌ಫೋನ್‌ನ ಬಳಕೆ ಹಾಗೂ ಅದಕ್ಕೆ ವಿದ್ಯುತ್‌ಪೂರಣ (ಚಾರ್ಜಿಂಗ್) ಮಾಡುವುದನ್ನು ನಿಷೇಧಿಸಲಾಗಿದೆಯೆಂದು ಸಿಂಗಾಪುರ ಏರ್‌ಲೈನ್ಸ್ ರವಿವಾರ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಆಸ್ಟ್ರೇಲಿಯದ ಕ್ವಾಂಟಾಸ್ ಹಾಗೂ ವರ್ಜಿನ್ ಆಸ್ಟ್ರೇಲಿಯ ಮತ್ತು ಅಬುದಾಭಿ ಮೂಲದ ಇತಿಹಾದ್ ವಿಮಾನಯಾನ ಸಂಸ್ಥೆಗಳು ಕೂಡಾ ಈಗಾಗಲೇ ತಮ್ಮ ವಿಮಾನಗಳಲ್ಲಿ ‘ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7’ ಮೊಬೈಲ್‌ಪೋನ್‌ನ ಬಳಕೆಯನ್ನು ನಿಷೇಧಿಸಿವೆ.

ಈ ಮಧ್ಯೆ ಅಮೆರಿಕದ ಫೆಡರಲ್ ವಿಮಾನಯಾನ ಆಡಳಿತ ಕೂಡಾ ಹೇಳಿಕೆಯೊಂದನ್ನು ನೀಡಿ, ಬ್ಯಾಗ್‌ಗಳಲ್ಲಿ ಈ ಮಾದರಿಯ ಮೊಬೈಲ್ ಫೋನನ್ನು ಇರಿಸಬಾರದೆಂದು ಪ್ರಯಾಣಿಕರಿಗೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News