ಅನಾಹುತ ತಪ್ಪಿಸಿ
Update: 2016-09-11 23:24 IST
ಮಾನ್ಯರೆ,
ಶಿವಮೊಗ್ಗ ತಾಲೂಕಿನ ಹಾಡೊಹಳ್ಳಿಯಲ್ಲಿ ಗಣೇಶನ ಮೂರ್ತಿ ವಿಸರ್ಜನೆ ವೇಳೆ 12 ಜನ ಜಲಸಮಾಧಿಯಾದ ಘಟನೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದರೂ ಹೊನ್ನಾಳಿ ತಾಲೂಕಿನ ನದಿ ಪಕ್ಕದ ಗ್ರಾಮದ ಜನರು ಎಚ್ಚೆತ್ತುಕೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ ಹೊನ್ನಾಳಿ ತಾಲೂಕಿನ ಬಾಗೇವಾಡಿ ಹಾಗೂ ಚೀಲೂರು ಮಧ್ಯೆ ಒಂದೇ ತೆಪ್ಪದಲ್ಲಿ 30 ರಿಂದ 40 ಜನರನ್ನು ಏಕಕಾಲಕ್ಕೆ ಸಾಗಿಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ದೊಡ್ಡ ಅಪಾಯಕ್ಕೆ ಎಡೆ ಮಾಡಿಕೊಟ್ಟರೂ ಆಶ್ಚರ್ಯಪಡಬೇಕಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಸುರಕ್ಷತೆ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತಾಗಲಿ ಹಾಗೂ ಅಮೂಲ್ಯ ಜೀವಗಳನ್ನು ಉಳಿಸುವಂತಾಗಲಿ.