×
Ad

ತಮಿಳುನಾಡಿನಲ್ಲಿ ಕನ್ನಡಿಗರ ಹೊಟೇಲ್ ಮೇಲೆ ಪೆಟ್ರೋಲ್ ಬಾಂಬು ಎಸೆತ

Update: 2016-09-12 11:46 IST

 ಚೆನ್ನೈ, ಸೆ.11: ಕಾವೇರಿಯ ವಿವಾದ ಇದೀಗ ತಮಿಳುನಾಡಿಗೂ ಹಬ್ಬಿದ್ದು, ಸೋಮವಾರ ಬೆಳಗ್ಗೆ ಕನ್ನಡಿಗರ ಒಡೆತನದ ಹೊಟೇಲ್‌ನ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಪೆಟ್ರೋಲ್ ಬಾಂಬುಗಳನ್ನು ಎಸೆದಿದ್ದಾರೆ.

ಆಟೋರಿಕ್ಷಾದಲ್ಲಿ ಬಂದ ದುಷ್ಕರ್ಮಿಗಳ ತಂಡ ನ್ಯೂ ವುಡ್‌ಲ್ಯಾಂಡ್ ಹೊಟೇಲ್‌ನ ಮುಂಭಾಗ ಆರು ಪೆಟ್ರೋಲ್ ಬಾಂಬುಗಳನ್ನು ಎಸೆದು ಪರಾರಿಯಾಗಿದ್ದಾರೆ. ಇದರಿಂದ ಹೊಟೇಲ್‌ನ ಗಾಜುಗಳು ಪುಡಿಪುಡಿಯಾಗಿದೆ.

ಇತ್ತೀಚೆಗೆ ಕನ್ನಡ ಚಿತ್ರನಟರು ಪ್ರತಿಭಟನೆ ನಡೆಸಿದ್ದನ್ನು ಸಾಮಾಜಿಕ ಜಾಲ ತಾಣದಲ್ಲಿ ಟೀಕಿಸಿದ್ದ ತಮಿಳುನಾಡಿನ ಎಂಜಿನಿಯರ್ ವಿದ್ಯಾರ್ಥಿಗೆ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಥಳಿಸಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಮರುದಿನವೇ ಹೊಟೇಲ್ ಮೇಲೆ ಈ ದಾಳಿ ನಡೆದಿದೆ. ಈ ದಾಳಿಯ ಹಿಂದೆ ಡಿಪಿಡಿಕೆ ಸಂಘಟನೆಯ ಕಾರ್ಯಕರ್ತರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News