ಪಾಕ್, ಬಾಂಗ್ಲಾದಲ್ಲಿ ಕಾರ್ಖಾನೆ ಮಾಡಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕಡಿವಾಣ ಹಾಕಲು ಹೊರಟಿದ್ದಾರೆ ರಾಮ್‌ದೇವ್ !

Update: 2016-09-12 09:01 GMT

ನವದೆಹಲಿ : ಭಾರತದ ಜೀನ್ಸ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳ ಹುಟ್ಟಡಗಿಸಲು ಯೋಗ ಗುರು ಬಾಬಾ ರಾಮದೇವ್ ಸದ್ಯದಲ್ಲಿಯೇ "ಪತಂಜಲಿ ಸ್ವದೇಶಿ ಜೀನ್ಸ್" ಹೊರತರಲಿದ್ದಾರೆ. ಈ ಬಗ್ಗೆ ರಾವದೇವ್ ರವಿವಾರದಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ನಮ್ಮ ಆರ್ಥಿಕತೆಯ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ವಿದೇಶಿ ಕಂಪೆನಿಗಳ ವಿರುದ್ಧ ಹೋರಾಡಬೇಕಿದೆ ಎಂದು ರಾಮದೇವ್ ಹೇಳುತ್ತಾರೆ. ಭಾರತದಲ್ಲಿ ಜೀನ್ಸ್ ಪ್ಯಾಂಟುಗಳಿಗೆ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ಪತಂಜಲಿ ದೇಶೀಯ ಬ್ರ್ಯಾಂಡಿನ ಜೀನ್ಸ್ ತಯಾರಿಸಲಿದೆ ಎಂದು ಅವರು ಹೇಳಿದ್ದಾರೆ.
ಪತಂಜಲಿ ಸದ್ಯದಲ್ಲಿಯೇ ವನಸ್ಪತಿ ಎಣ್ಣೆ ಹಾಗೂ ಟಾಯ್ಲೆಟ್ ಕ್ಲೀನರ್ ಸಹಿತ ಹಲವಾರು ಗೃಹೋಪಯೋಗಿ ಉತ್ಪನ್ನಗಳನ್ನುತಯಾರಿಸಲಿದೆ ಎಂದುಮಾಹಿತಿ ನೀಡಿದ್ದಾರೆ
ಪತಂಜಲಿ ತನ್ನ ಘಟಕಗಳನ್ನು ಭಾರತದಲ್ಲಿ ಅಲ್ಲದೇ, ನೇಪಾಳ ಹಾಗೂ ಬಾಂಗ್ಲಾದೇಶದಲ್ಲೂ ತೆರೆದಿದೆ. ಆ ದೇಶಗಳಲ್ಲಿ ಗಳಿಸಲಾದ ಲಾಭದ ಮೊತ್ತವನ್ನು ಅಲ್ಲಿಯೇ ಉಪಯೋಗಿಸಲಾಗುವುದು ಎಂದು ರಾಮದೇವ್ ಹೇಳಿದರಲ್ಲದೆ, ಅನುಮತಿ ದೊರೆತರೆ ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದಲ್ಲೂ ಘಟಕಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ. ಆಫ್ರಿಕಾದಲ್ಲೂ ತನ್ನ ಫ್ಯಾಕ್ಟರಿಗಳನ್ನು ತೆರೆಯುವ ಯೋಚನೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಪತಂಜಲಿ ತನ್ನ ಘಟಕಗಳನ್ನು ಮಧ್ಯ ಪ್ರದೇಶ, ಅಸ್ಸಾಂ, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ ಹಾಗೂ ಆಂಧ್ರ ಪ್ರದೇಶಗಳಲ್ಲಿ ತೆರೆಯಲಿದೆ ಹಾಗೂ ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದ ತನ್ನ ಘಟಕಗಳನ್ನು ವಿಸ್ತರಿಸಲಿದೆಯೆಂದು ರಾಮದೇವ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News