ಕೇಂದ್ರ ಸಚಿವೆ ಅನುಪ್ರಿಯಾರೊಂದಿಗೆ ಅನುಚಿತ ವರ್ತನೆ

Update: 2016-09-12 09:51 GMT

ಲಕ್ನೋ, ಸೆ.12: ರೋಡ್ ಶೋ ನಡೆಸುತ್ತಿದ್ದ ಕೇಂದ್ರ ಸಚಿವೆ ಹಾಗೂ ಅಪ್ನಾ ದಳದ ನಾಯಕಿ ಅನುಪ್ರಿಯಾ ಪಟೇಲ್‌ರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ 158ಕ್ಕೂ ಅಧಿಕ ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

 ‘‘ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಹಾಗೂ ಅವರ ಪಕ್ಷದ ಕಾರ್ಯಕರ್ತರು ರೋಡ್ ಶೋ ನಡೆಸುತ್ತಿರುವಾಗ ಅನುಪ್ರಿಯಾರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಸ್ಥಳೀಯ ಮುಖಂಡ ವಿನೋದ್ ದುಬೆ ಸಹಿತ 158 ಮಂದಿಯ ವಿರುದ್ಧ ರಾಣಿಗಂಝ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆ ನಿನ್ನೆ ಮಧಾಹ್ನ ನಡೆದಿತ್ತು’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯೋಜನೆ ಹಾಕಿಕೊಂಡಿರುವ ದುಬೆ ಬೆಂಬಲಿಗರು ಹಾಗೂ ಅನುಪ್ರಿಯಾ ಬೆಂಬಲಿಗರ ಮೆರವಣಿಗೆಯ ವೇಳೆ ಪರಸ್ಪರ ಮುಖಾಮುಖಿಯಾದಾಗ ಈ ಘಟನೆ ನಡೆದಿದೆ.

 ನನ್ನ ಪಕ್ಷದ ಮೆರವಣಿಗೆಯನ್ನು ಅಡ್ಡಿಪಡಿಸಲು ನಡೆಸಿದ ಪಿತೂರಿ ಇದಾಗಿದೆ ಎಂದು ಆರೋಪಿಸಿರುವ ಪಟೇಲ್, ‘‘ಇದು ಆಡಳಿತಾರೂಢ ಸಮಾಜವಾದಿ ಪಕ್ಷದ ಪಿತೂರಿ.ನನಗೆ ಯಾವುದೇ ಭದ್ರತೆಯನ್ನು ಒದಗಿಸಲಾಗಿಲ್ಲ. ದೂರು ನೀಡಿದ ಮೇಲೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸ್ ಅಧೀಕ್ಷಕರು ಸ್ಥಳಕ್ಕೆ ತಕ್ಷಣವೇ ಬರಲಿಲ್ಲ’’ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News