×
Ad

ಇವು ಜಗತ್ತಿನ 31 ಅತ್ಯಂತ ಸಂತುಷ್ಟ, ಶ್ರೀಮಂತ, ಆರೋಗ್ಯವಂತ ಹಾಗೂ ಸುರಕ್ಷಿತ ದೇಶಗಳು

Update: 2016-09-12 16:09 IST

ಲಂಡನ್, ಸೆ.12: ಪ್ರತಿ ವರ್ಷ ಲಂಡನ್ ಮೂಲದ ಲೆಗಾಟಮ್ ಇನ್‌ಸ್ಟಿಟ್ಯೂಟ್ ವಾರ್ಷಿಕ ಜಾಗತಿಕ ಸಮೃದ್ಧಿ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ, ಇದು ವಿಶ್ವದ ಶ್ರೀಮಂತ ದೇಶಗಳ ರ್ಯಾಂಕಿಂಗ್ ಪಟ್ಟಿ. ದೇಶ ಹೊಂದಿರುವ ಹಣ, ಸಮೃದ್ಧಿಯ ಒಂದು ಅಂಶ. ಆದರೆ ಅದಷ್ಟಕ್ಕೇ ಸೀಮಿತವಾಗದೇ ಈ ಸಂಸ್ಥೆ 89 ಮಾನದಂಡಗಳನ್ನು ಅನುಸರಿಸಿ, ಸಮೃದ್ಧಿಯನ್ನು ಅಳೆಯುತ್ತದೆ.

ಇದರಲ್ಲಿ ಸಾಂಪ್ರದಾಯಿಕವಾಗಿ ಬಳಸುವ ತಲಾದಾಯ, ಜಿಡಿಪಿ, ಪೂರ್ಣಕಾಲಿಕ ಉದ್ಯೋಗ ಹೊಂದಿದ ಜನರ ಸಂಖ್ಯೆಯ ಜತೆಗೆ ವಿನೂತನ ಮಾನದಂಡಗಳಾದ ಸುರಕ್ಷಿತ ಇಂಟರ್‌ನೆಟ್ ಸರ್ವರ್‌ನಂಥ ಅಂಶವನ್ನೂ ಪರಿಗಣಿಸುತ್ತದೆ. ಇವುಗಳನ್ನು ಎಂಟು ಉಪ ಸೂಚ್ಯಂಕಗಳಾಗಿ ವಿಭಾಗಿಸಲಾಗುತ್ತದೆ. ಆರ್ಥಿಕತೆ, ಉದ್ಯಮಶೀಲತೆ ಹಾಗೂ ಅವಕಾಶ, ಆಡಳಿತ, ಶಿಕ್ಷಣ, ಆರೋಗ್ಯ, ಭದ್ರತೆ ಹಾಗೂ ಸುರಕ್ಷತೆ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಬಂಡವಾಳ ಈ ಎಂಟು ಉಪಸೂಚ್ಯಂಕಗಳು. ವಿಶ್ವದ 142 ದೇಶಗಳ ಲಭ್ಯ ಅಂಕಿ ಅಂಶಗಳ ಆಧಾರದಲ್ಲಿ ಈ ಪಟ್ಟಿ ಸಿದ್ಧಪಡಿಸಿದೆ.

ಅಗ್ರ 31 ದೇಶಗಳ ಪಟ್ಟಿ ಇಲ್ಲಿದೆ. ಅದರಲ್ಲಿ ನಾವೂ ಸೇರಿದ್ದೇವೆಯೇ?

ಫ್ರಾನ್ಸ್, ಮಾಲ್ಟಾ, ಸ್ಪೇನ್, ಸ್ಲೊವಾನಿಯಾ, ಜೆಕ್ ಗಣರಾಜ್ಯ, ಪೋರ್ಚ್‌ಗಲ್, ದಕ್ಷಿಣ ಕೊರಿಯಾ, ಪೋಲಂಡ್, ಯುಎಇ, ಆಸ್ಟೋನಿಯಾ ಅನುಕ್ರಮವಾಗಿ 22ರಿಂದ 31ನೇ ಸ್ಥಾನ ಪಡೆದಿವೆ.

ಅಮೆರಿಕ, ಐಸ್‌ಲ್ಯಾಂಡ್, ಲಕ್ಸಂಬರ್ಗ್, ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಾಪುರ, ಬೆಲ್ಜಿಯಂ, ಜಪಾನ್, ಹಾಂಕಾಂಗ್, ಥೈವಾನ್ ದೇಶಗಳಿಗೆ ಅನುಕ್ರಮವಾಗಿ 11ರಿಂದ 21ನೇ ರ್ಯಾಂಕ್.

ಅಗ್ರ ಹತ್ತು ದೇಶಗಳು?

ನಾರ್ವೆ, ಸ್ವಿಡ್ಜರ್‌ಲೆಂಡ್, ಡೆನ್ಮಾರ್ಕ್, ನ್ಯೂಜಿಲೆಂಡ್, ಸ್ವೀಡನ್, ಕೆನಡಾ, ಆಸ್ಟ್ರೇಲಿಯ, ನೆದರ್ಲೆಂಡ್ಸ್, ಫಿನ್‌ಲ್ಯಾಂಡ್ ಹಾಗೂ ಐರ್ಲೆಂಡ್ ಕ್ರಮವಾಗಿ ಮೊದಲ ಹತ್ತು ರ್ಯಾಂಕಿಂಗ್ ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News