×
Ad

ತಂಬಾಕು ಜಗಿದು ಉಗುಳಿ ಮೃತಪಟ್ಟ ಯುವಕ!

Update: 2016-09-13 14:23 IST

ಮುಂಬೈ, ಸೆ.13: 21 ವರ್ಷದ ಯುವಕನೊಬ್ಬನ ತಂಬಾಕು ತಿನ್ನುವ ಅಭ್ಯಾಸ ಅಪಘಾತವೊಂದಕ್ಕೆ ಕಾರಣವಾಗಿ ಆತ ಜೀವ ಕಳೆದುಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಮಾಲೆಗಾಂವ್ ನಲ್ಲಿ ನಡೆದಿದೆ.

ಇಲ್ಲಿನ ಅಬ್ದುಲ್ ಖಾಲಿಕ್ ಪಾರ್ಕ್ ನ ನಿವಾಸಿ ಮುಹಮ್ಮದ್ ಅಮೀನ್ ಎಂಬವರನ್ನು ಭೇಟಿಯಾಗಲು ಆತನ ಸೋದರ ಮುಹಮ್ಮದ್ ಯಾಸೀನ್ ಸಲೀಂ ಬಂದಿದ್ದ. ಕಟ್ಟಡದ ಮೇಲಿನ ಮಹಡಿಯಲ್ಲಿ ಅಮೀನ್ ಕೆಲಸ ಮಾಡುತ್ತಿದ್ದ ಜಾಗದಲ್ಲಿ ನಿಂತುಕೊಂಡು ಸಲೀಂ ತಾನು ಜಗಿಯುತ್ತಿದ್ದ ತಂಬಾಕನ್ನು ಕೆಳಗೆ ಉಗುಳಿದ. ಆದರೆ ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಸಲಿಂ ಅಲ್ಲೇ ಇದ್ದ ಹೈಟೆನ್ಷನ್ ವಿದ್ಯುತ್ ತಂತಿಯ ಮೇಲೆ ಬಿದ್ದು ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News