×
Ad

ಅತ್ಯಂತ ಶ್ರೀಮಂತ ಕ್ರಿಕೆಟರ್ ವಿರಾಟ್, ಹಿರಿಯ ಶ್ರೀನಾಥ್ ಕುರಿತು ಈ ಖ್ಯಾತ ಕ್ರಿಕೆಟಿಗ ಹೇಳಿದರು ಕುತೂಹಲಕಾರಿ ಮಾಹಿತಿ

Update: 2016-09-13 23:30 IST

ಇಂದಿನ ಪೀಳಿಗೆಯ ಕ್ರಿಕೆಟಿಗರ ಪೈಕಿ ಅತ್ಯಂತ ವಿಧ್ವಂಸಕ ಬ್ಯಾಟ್ಸ್‌ಮನ್ ಎನಿಸಿದ ವಿರಾಟ್ ಕೊಹ್ಲಿ, 22 ಯಾರ್ಡ್‌ನಲ್ಲಿ ರನ್ ಗುಡ್ಡೆಹಾಕುವುದರಲ್ಲಿ ಉದಾರಿ.ಉಳಿದಂತೆ ಜಿಪುಣ. ಇದು ಬೇರಾರ ವ್ಯಾಖ್ಯಾನವೂ ಅಲ್ಲ. ಕೊಹ್ಲಿಯವರ ಆತ್ಮೀಯ ಗೆಳೆಯ ಯುವರಾಜ್ ಸಿಂಗ್ ಅನಿಸಿಕೆ. ಕೊಹ್ಲಿ ಇಡೀ ಭಾರತೀಯ ತಂಡದಲ್ಲೇ ಅತ್ಯಂತ ಜಿಪುಣ ಎಂಬ ರಹಸ್ಯವನ್ನು ರೇಡಿಯೊ ಮಿರ್ಚಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಯುವಿ ಬಹಿರಂಗಡಿಸಿದ್ದಾರೆ.

"ತಂಡದಲ್ಲಿ ಬಹಳಷ್ಟು ಮಂದಿ ಖಂಜೂಸ್‌ಗಳಿದ್ದಾರೆ. ಆದರೆ ಭಾವನಾತ್ಮಕ ವಿಷಯವಾಗಿರುವುದರಿಂದ ಆ ಹಿರಿಯರ ಹೆಸರು ಬಹಿರಂಗಪಡಿಸುವುದಿಲ್ಲ" ಎಂದು ಹೇಳಿದ್ದಾರೆ. "ಪ್ರತಿ ಬಾರಿ ಔಟಿಂಗ್ ಹೋದಾಗಲೂ ನಾನೇ ಹಣ ನೀಡುತ್ತೇನೆ. ಕೊಹ್ಲಿಯಿಂದ ಖರ್ಚು ಮಾಡಿಸಬೇಕು ಎನ್ನುವುದು ನನ್ನ ಆಸೆ"

 ಆಶೀಶ್ ನೆಹ್ರಾ ಹಿಂದೆ ಉದಾರಿ ಇದ್ದವರು ಮದುವೆ ಬಳಿಕ ಜಿಪುಣನಾಗಿದ್ದಾನೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮಾಜಿ ಸ್ಪೀಡ್‌ಸ್ಟಾರ್ ಜಾವಗಲ್ ಶ್ರೀನಾಥ್ ಬಗ್ಗೆ ಜೋಕ್ ಮಾಡಿದ್ದು ಹೀಗೆ: "ಹಿರಿಯ ಆಟಗಾರರಲ್ಲಿ ಜಾವಗಲ್ ಶ್ರೀನಾಥ್ ಉದಾರಿ. ಅವರ ಜತೆಗೆ ಇಷ್ಟೊಂದು ಕ್ರಿಕೆಟ್ ಆಡಿದ ಬಳಿಕ ಅಂತಿಮವಾಗಿ ನಮಗೆ ದಾಲ್ ಚವಲ್ ಟ್ರೀಟ್ ಕೊಡಿಸಿದರು. ಆ ಚಿತ್ರವನ್ನು ನಾವು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿ, ಥ್ಯಾಂಕ್ಯೂ ಶ್ರೀನಾಥ್ ಜಿ. 15 ವರ್ಷದ ಬಳಿಕ ಟ್ರೀಟ್ ಕೊಟ್ಟಿದ್ದೀರಿ ಎಂದು ಶೀರ್ಷಿಕೆ ಹಾಕಿದ್ದೆವು"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News