×
Ad

ಸಿರಿಯ ಬಿಕ್ಕಟ್ಟು: 3 ಲಕ್ಷಕ್ಕೂ ಅಧಿಕ ಸಾವು

Update: 2016-09-13 21:45 IST

ಬೆರೂತ್ (ಲೆಬನಾನ್), ಸೆ. 13: ಸಿರಿಯದಲ್ಲಿ 2011 ಮಾರ್ಚ್‌ನಲ್ಲಿ ಆಂತರಿಕ ಸಂಘರ್ಷ ಆರಂಭಗೊಂಡಂದಿನಿಂದ 3 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಮಂಗಳವಾರ ಹೇಳಿದೆ.
ಈ ಅವಧಿಯಲ್ಲಿ ಸಿರಿಯದಲ್ಲಿ ಒಟ್ಟು 3,01,781 ಮಂದಿ ಮೃತಪಟ್ಟಿದ್ದು, ಆ ಪೈಕಿ 86,000ಕ್ಕೂ ಅಧಿಕ ಮಂದಿ ನಾಗರಿಕರು ಎಂದು ಅದು ತಿಳಿಸಿದೆ.
ಮೃತ ನಾಗರಿಕರ ಪೈಕಿ 15,099 ಮಕ್ಕಳು ಮತ್ತು 10,018 ಮಹಿಳೆಯರು ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ವೀಕ್ಷಣಾಲಯ ಹೇಳಿದೆ.
ಮೃತಪಟ್ಟ ಬಂಡುಕೋರ ಹೋರಾಟಗಾರರ ಸಂಖ್ಯೆ 52,359.

ಈ ಅವಧಿಯಲ್ಲಿ 59,006 ಸಿರಿಯ ಸೈನಿಕರೂ ಹತರಾಗಿದ್ದಾರೆ. ಜೊತೆಗೆ ಸಿರಿಯದ ಪರವಾಗಿ ಹೋರಾಡಿದ ಇರಾಕ್, ಇರಾನ್, ಲೆಬನಾನ್ ಮತ್ತು ಸಿರಿಯಗಳ 48,048 ಹೋರಾಟಗಾರರು ಹತರಾಗಿದ್ದಾರೆ.

ಐಸಿಸ್ ಮತ್ತು ಫತೇಹ್ ಅಲ್-ಶಾಮ್ ಫ್ರಂಟ್‌ನ 52,031 ಭುಯೋತ್ಪಾದಕರೂ ಯುದ್ಧದಲ್ಲಿ ಮಡಿದಿದ್ದಾರೆ.
ಹಾಗೂ, ಉಳಿದ 3,645 ಮಂದಿಯನ್ನು ಗುರುತಿಸಲಾಗಿಲ್ಲ ಎಂದು ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News