×
Ad

ಪ್ರಚಾರ ಕಣದಲ್ಲಿರುವ ಹಿಲರಿ ಕ್ಲಿಂಟನ್ ನಕಲಿಯೇ ?

Update: 2016-09-13 22:52 IST

ವಾಷಿಂಗ್ಟನ್ , ಸೆ. 13 : ಈಗ ಬಿರುಸಿನ ಪ್ರಚಾರ ನಡೆಸುತ್ತಿರುವ ಅಮೇರಿಕಾದ ಡೆಮೊಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ  ಹಿಲರಿ ಕ್ಲಿಂಟನ್  ನಿಜವಾದ ಹಿಲರಿ ಅಲ್ಲವೇ  ? ಹೀಗೊಂದು ಪ್ರಶ್ನೆ ಅಮೇರಿಕಾದ ಕೆಲವು ಮಾಧ್ಯಮಗಳಲ್ಲಿ ಹಾಗು ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. 


ನ್ಯುಯಾರ್ಕ್ ನಲ್ಲಿ ನಡೆದ 9/11 ರ ದಾಳಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಹಿಲರಿ ಅಸ್ವಸ್ಥಗೊಂಡು ಕುಸಿದಿದ್ದರು. ಬಳಿಕ ತಾನು ನ್ಯುಮೋನಿಯಾದಿಂದ ಬಳಲುತ್ತಿರುವುದಾಗಿ ಪ್ರಕಟಿಸಿದ ಹಿಲರಿ ತಾನು ಅಂದು ಕುಸಿದು ಬೀಳಲಿಲ್ಲ, ಕೇವಲ ಆಯಾಸಗೊಂಡಿದ್ದೆ ಎಂದು ಹೇಳಿದ್ದರು. 


ಈ ಪ್ರಕರಣದ ಬಳಿಕ  ಹಿಲರಿ ತಮ್ಮ ಪುತ್ರಿ ಚೆಲ್ಸಿಯ ಮನೆಗೆ ತೆರಳಿದ್ದರು. ಅಲ್ಲಿಂದ ಹೊರಬಂದಿರುವುದು ನಿಜವಾದ ಹಿಲರಿ ಅಲ್ಲ, ಬದಲಿಗೆ ಅವರನ್ನೇ ಹೋಲುವ ಡ್ಯೂಪ್ ( ನಕಲಿ ಅಥವಾ ಬಾಡಿ ಡಬಲ್ ) ಎಂದು ಅಮೆರಿಕನ್ನರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮನೆಯೊಳಗೆ ಹೋದ ಹಾಗು ಹೊರಬಂದ ಹಿಲರಿಗಳಲ್ಲಿ ಎದ್ದು ಕಾಣುತ್ತಿರುವ ' ದೈಹಿಕ ವ್ಯತ್ಯಾಸಗಳು '. 


ಹಿಲರಿಯ ಮೂಗು, ಕಿವಿ , ಬೆರಳುಗಳು ಹಾಗು ತೂಕ ಚೆಲ್ಸಿಯ ಮನೆಯಿಂದ ಹೊರಬಂದ ' ಹಿಲರಿ ' ಗಿಂತ ಬಹಳ ಭಿನ್ನವಾಗಿವೆ. ಇದಕ್ಕೆ ಪುರಾವೆಯಾಗಿ ಇಬ್ಬರನ್ನು ಹೋಲಿಸಿ ತೋರಿಸುವ ಚಿತ್ರಗಳು ಪ್ರಚಾರದಲ್ಲಿವೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News