×
Ad

ರಾಜೀವ್ ಹಂತಕ ಪೆರರಿವಾಲನ್‌ಗೆ ಕಾರಾಗೃಹದಲ್ಲಿ ಸಹ ಕೈದಿಯಿಂದ ಹಲ್ಲೆ

Update: 2016-09-13 22:56 IST

ವೆಲ್ಲೂರು, ಸೆ.13: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎ.ಜಿ. ಪೆರರಿವಾಲನ್ ಅಲಿಯಾಸ್ ಅರಿವು ಎಂಬಾತನಿಗೆ ವೆಲ್ಲೂರು ಕೇಂದ್ರ ಕಾರಾಗೃಹದ ಸಹಕೈದಿಯೊಬ್ಬ ಮಂಗಳವಾರ ಮುಂಜಾನೆ ಕಬ್ಬಿಣದ ಸರಳುಗಳಿಂದ ಥಳಿಸಿ ಗಾಯಗೊಳಿಸಿದ್ದಾನೆ.

ಅಪಹರಣ ಹಾಗೂ ಹತ್ಯೆ ಪ್ರಕರಣವೊಂದರಲ್ಲಿ ಕಳೆದ 13 ವರ್ಷಗಳಿಂದ ಕಾರಾಗೃಹದಲ್ಲಿರುವ ಜೀವಾವಾದಿ ಕೈದಿ ರಾಜೇಶ್ ಖನ್ನಾ(46) ಎಂಬಾತ ಮುಂಜಾನೆ 6:5ರ ಸುಮಾರಿಗೆ, 25 ವರ್ಷಗಳಿಂದ ಬಂಧನದಲ್ಲಿರುವ ಪೆರರಿವಾಲನ್‌ನೊಂದಿಗೆ ಜಗಳ ಆರಂಭಿಸಿದನು. ಅದು ಮಾರಾಮಾರಿಗೆ ಕಾರಣವಾಗಿ, ಖನ್ನಾ ಆತನಿಗೆ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದನೆಂದು ಹಿರಿಯ ಬಂದಿಖಾನೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೆರರಿವಾಲನ್‌ಗೆ ಲಘು ಗಾಯಗಳಾಗಿವೆ. ಕಾರಾಗೃಹದ ಆಸ್ಪತ್ರೆಯಲ್ಲಿ ಆತನ ಹಣೆಗಾದ ಗಾಯಗಳಿಗೆ 4 ಹೊಲಿಗೆಗಳನ್ನು ಹಾಕಿ ಚಿಕಿತ್ಸೆ ನೀಡಲಾಗಿದೆಯೆಂದು ವೆಲ್ಲೂರು ಕಾರಾಗೃಹದ ಡಿಐಜಿ ಮುಹಮ್ಮದ್ ಹನೀಫಾ ಹೇಳಿದ್ದಾರೆ.
ತನಿಖೆ ಪ್ರಗತಿಯಲ್ಲಿದ್ದು, ಪೆರರಿವಾಲನ್‌ನ ತಾಯಿ ಅರ್ಪುತಮ್ಮಾಳ್ ಮಗನನ್ನು ಕಾಣಲು ವೆಲ್ಲೂರಿಗೆ ಹೊರಟಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News