×
Ad

ತಮಿಳುನಾಡಿನಲ್ಲಿ ಎರಡನೆ ದಿನವೂ ಮುಂದುವರಿದ ಕಾವೇರಿ ಪ್ರತಿಭಟನೆ

Update: 2016-09-13 23:10 IST

ಚೆನ್ನೈ, ಸೆ.13: ತಮಿಳುನಾಡಿನ ಕೆಲವೆಡೆಗಳಲ್ಲಿ ಎರಡನೆ ದಿನವಾದ ಮಂಗಳವಾರವೂ ಕಾವೇರಿ ಪ್ರತಿಭಟನೆ ಮುಂದುವರಿದಿತ್ತು. ಇಲ್ಲಿ ಮತ್ತು ಕೊಯಮತ್ತೂರಿನಲ್ಲಿ ನಾಮ್ ತಮಿಳರ್ ಕಚ್ಚಿ(ಎನ್‌ಎಂಕೆ)ಯಂತಹ ಕೆಲವು ಸಣ್ಣಪುಟ್ಟ ಸಂಘಟನೆಗಳು ಕನ್ನಡಿಗರಿಗೆ ಸೇರಿದ ಸಂಸ್ಥೆಗಳ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದರು.

ಚೆನ್ನೈನಲ್ಲಿ ಅಪರಿಚಿತ ದುಷ್ಕರ್ಮಿಗಳು ಕರ್ಣಾಟಕ ಬ್ಯಾಂಕಿನ ಎಟಿಎಮ್‌ಗೆ ಕಲ್ಲುಗಳನ್ನು ತೂರಿ ಗಾಜನ್ನು ಪುಡಿ ಮಾಡಿದ್ದರೆ, ಎನ್‌ಎಂಕೆ ಕಾರ್ಯಕರ್ತರು ನಗರದ ವಿವಿಧೆಡೆಗಳಲ್ಲಿ ಕನ್ನಡಿಗರ ಹೊಟೇಲ್‌ಗಳ ಮುಂದೆ ಪ್ರತಿಭಟನೆಗಳ್ನು ನಡೆಸಿದ್ದಾರೆ. ಮೈಲಾಪುರದಲ್ಲಿ ಕನ್ನಡಿಗರ ಹೊಟೇಲ್‌ಗೆ ನುಗ್ಗಲು ಯತ್ನಿಸಿದ್ದ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಯಮತ್ತೂರಿನಲ್ಲಿ ಕರ್ನಾಟಕದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಸುಮಾರು 30 ಎನ್‌ಎಂಕೆ ಕಾರ್ಯಕರ್ತರು ಸ್ಥಳೀಯ ಕರ್ನಾಟಕ ಸಂಘದತ್ತ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದು ಬಂಧಿಸಿದರು.
ನೈವೇಲಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿಯನ್ನು ದಹಿಸುವ ಪ್ರತಿಭಟನಾಕಾರರ ಪ್ರಯತ್ನವನ್ನು ವಿಫಲಗೊಳಿಸಿದ ಪೊಲೀಸರು ಟಿವಿಕೆ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು.
ಕನ್ನಡಿಗರ ಉದ್ಯಮಗಳಿಗೆ ಮತ್ತು ಆ ರಾಜ್ಯದ ಬಸ್ಸುಗಳಿಗೆ ಪೊಲೀಸರ ರಕ್ಷಣೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News