ವಿಶ್ವದ ಅತಿದೊಡ್ಡ ಕ್ರೂಸ್ ನಲ್ಲಿ ದುರಂತ !
ಮಾರ್ಸೆಯಿಲೆ(ಫ್ರಾನ್ಸ್),ಸೆ.13: ವಿಶ್ವದ ಅತ್ಯಂತ ಬೃಹತ್ ಐಷಾರಾಮಿ ಪ್ರವಾಸಿ ಹಡಗು ‘ಹಾರ್ಮನಿ ಆಫ್ ಸೀಸ್ ’ನಲ್ಲಿ ಸಂಭವಿಸಿದ ಅವಘಡದಲ್ಲಿ ಫಿಲಿಪ್ಪೀನ್ಸ್ ಮೂಲದ ಸಿಬ್ಬಂದಿಯೋರ್ವ ಸಾವನ್ನಪ್ಪಿದ್ದು,ಓರ್ವ ಭಾರತೀಯ ಹಾಗು ಮೂವರು ಫಿಲಿಪ್ಪಿನೋಗಳು ಸೇರಿದಂತೆ ಇತರ ನಾಲ್ವರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಹಡಗು ಇಲ್ಲಿ ಲಂಗರು ಹಾಕಿದ್ದು, ಸುರಕ್ಷತಾ ಅಭ್ಯಾಸದ ವೇಳೆ ಐವರು ಸಿಬ್ಬಂದಿಗಳಿದ್ದ ಲೈಫ್ ಬೋಟ್ ಐದನೇ ಡೆಕ್‌ನಿಂದ ಕಳಚಿಕೊಂಡು ಸುಮಾರು 33 ಅಡಿಗಳಷ್ಟು ಕೆಳಗೆ ಸಮುದ್ರದಲ್ಲಿ ಬಿದ್ದಿತ್ತು.
ಹಡಗನ್ನು ನಿರ್ವಹಿಸುತ್ತಿರುವ ರಾಯಲ್ ಕೆರಿಬಿಯನ್ ಕ್ರುಯಿಸ್ ಕಂಪನಿಯು ಟ್ವಿಟರ್ ಸಂದೇಶದಲ್ಲಿ ಸಿಬ್ಬಂದಿಯ ಸಾವನ್ನು ದೃಢೀಕರಿಸಿದೆ.
362 ಮೀ.ಉದ್ದವಿರುವ ಹಾರ್ಮನಿ ಆಫ್ ಸೀಸ್ 8,000ಕ್ಕೂ ಅಧಿಕ ಪ್ರಯಾಣಿಕರು ಮತ್ತು ಸಿಬ್ಬಂದಿಗಳಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
25 ಅಂತಸ್ತಗಳ ಕಟ್ಟಡದಷ್ಟು ಎತ್ತರವಿರುವ ಈ ಹಡಗು ಐಫೆಲ್ ಗೋಪುರದ ಎತ್ತರಕ್ಕಿಂತ ಹೆಚ್ಚು ಉದ್ದವಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ತನ್ನ ಕಾರ್ಯಾರಣೆಯನ್ನು ಆರಂಭಿಸಿದ ಹಡಗು 20 ರೆಸ್ಟಾರಂಟ್‌ಗಳು,23 ಈಜುಕೊಳಗಳು,ಚಿತ್ರಮಂದಿರ ಮತ್ತು ಕ್ಯಾಸಿನೋವನ್ನು ಹೊಂದಿದೆ.