×
Ad

‘ಬಳಸಿದ ಹೆಂಡತಿ’ ಮಾರಾಟಕ್ಕಿದೆ!

Update: 2016-09-14 19:26 IST

ಲಂಡನ್, ಸೆ. 14: ತನ್ನ ಬಗ್ಗೆ ‘‘ಸಹಾನುಭೂತಿ ಇರದ’’ ಪತ್ನಿಯನ್ನು ಬ್ರಿಟನ್‌ನ ವ್ಯಕ್ತಿಯೊಬ್ಬ ಇ-ಬೇ ಮಾರಾಟ ವೆಬ್‌ಸೈಟ್‌ನಲ್ಲಿ ಹರಾಜಿಗಿಟ್ಟ ಘಟನೆಯೊಂದು ವರದಿಯಾಗಿದೆ.


ಯಾರ್ಕ್‌ಶಯರ್‌ನ ವೇಕ್‌ಫೀಲ್ಡ್ ನಿವಾಸಿ 33 ವರ್ಷದ ಸೈಮನ್ ಒ’ಕೇನ್ ತನ್ನ ಹೆಂಡತಿ ಇಬ್ಬರು ಮಕ್ಕಳ ತಾಯಿ 27 ವರ್ಷದ ಲಿಯಾಂಡ್ರಾರನ್ನು ಹಳೆ ಕಾರನ್ನು ಹರಾಜಿಗಿಡುವ ರೀತಿಯಲ್ಲಿ ಹರಾಜಿಗಿಟ್ಟಿದ್ದಾನೆ.


ಹರಾಜಿಗಿಟ್ಟ ಎರಡೇ ದಿನಗಳಲ್ಲಿ ಬಿಡ್ 66,000 ಪೌಂಡ್‌ವರೆಗೆ ಏರಿಕೆ ಕಂಡಿದೆ.
ತನಗೆ ಜ್ವರ ಬಂದಾಗ ಹೆಂಡತಿ ಸಾಕಷ್ಟು ಕಾಳಜಿ ತೋರಿಲ್ಲ ಎನ್ನುವುದು ಆತನ ಅಸಮಾಧಾನಕ್ಕೆ ಕಾರಣ!


‘‘ಬಳಸಿದ ಹೆಂಡತಿ’’ ಎಂಬ ಹೆಸರಿನಲ್ಲಿ ಜಾಹೀರಾತು ಪ್ರಕಟವಾಗಿದೆ. ಲಿಯಾಂಡ್ರಾರ ಚಿತ್ರವೂ ಇದೆ. ಹೆಂಡತಿಯನ್ನು ಹರಾಜಿಗಿಡಲು ಏನು ಕಾರಣ ಹಾಗೂ ಖರೀದಿಯ ಸಾಧಕ-ಬಾಧಕಗಳೇನು ಎಂಬ ವಿವರಗಳನ್ನೂ ಅದು ಒಳಗೊಂಡಿದೆ ಎಂದು ‘ಡೇಲಿ ಎಕ್ಸ್‌ಪ್ರೆಸ್’ ವರದಿ ಮಾಡಿದೆ.


ಜಾಹೀರಾತು ಹೀಗಿದೆ: ‘‘ಮಾರಾಟಕ್ಕಾಗಿ- ಒಂದು ಹೆಂಡತಿ. ಹೊಸದಲ್ಲ, ಬಳಸಲಾಗಿದೆ. ಆದರೆ, ಇನ್ನೂ ಹಲವು ಉತ್ತಮ ಮೈಲಿಗಳನ್ನು ಓಡುವ ಸಾಮರ್ಥ್ಯವಿದೆ’’.
ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿರುವ ಹೆಂಡತಿ ಲಿಯಾಂಡ್ರಾ, ಗಂಡನನ್ನು ಕೊಲ್ಲುವಷ್ಟು ಕೋಪವಿದೆ ಎಂದಿದ್ದಾರೆ.
ಬಳಿಕ ಈ ಕುಚೇಷ್ಟೆಯ ಜಾಹೀರಾತನ್ನು ಇ-ಬೇ ತೆಗೆದುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News