×
Ad

ಭಾರತ ಸಂಜಾತ ವಿಜ್ಞಾನಿಗೆ 3.34 ಕೋಟಿ ರೂ. ನಗದು ಪ್ರಶಸ್ತಿ

Update: 2016-09-14 21:35 IST

ವಾಶಿಂಗ್ಟನ್, ಸೆ. 14: ಜನರ ಬದುಕನ್ನು ಆರಾಮದಾಯಕವಾಗಿಸುವ ನಿಟ್ಟಿನಲ್ಲಿ ನಡೆಸಿದ ಅಮೋಘ ಸಂಶೋಧನೆಗಳಿಗಾಗಿ ಭಾರತೀಯ ಮೂಲಕ ವಿಜ್ಞಾನಿ ರಮೇಶ್ ರಸ್ಕರ್ ಅವರಿಗೆ ಪ್ರತಿಷ್ಠಿತ ಲೆಮಲ್‌ಸನ್ ಎಂಐಟಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು 5 ಲಕ್ಷ ಡಾಲರ್ (3.34 ಕೋಟಿ ರೂಪಾಯಿ) ನಗದು ಒಳಗೊಂಡಿದೆ.

ನಾಸಿಕ್ ಸಂಜಾತ 46 ವರ್ಷದ ರಮೇಶ್ ಎಂಐಟಿ ಮೀಡಿಯಾ ಲ್ಯಾಬ್‌ನಲ್ಲಿರುವ ಕ್ಯಾಮರ ಕಲ್ಚರ್ ಸಂಶೋಧನಾ ಗುಂಪಿನ ಸ್ಥಾಪಕ ಹಾಗೂ ಮೀಡಿಯ ಆರ್ಟ್ಸ್ ಆ್ಯಂಡ್ ಸಯನ್ಸಸ್‌ನ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ.


‘‘ರಸ್ಕರ್ 2016ರ ಲೆಮಲ್‌ಸನ್-ಎಂಐಟಿ ಪ್ರಶಸ್ತಿಯ ವಿಜೇತರಾಗಿದ್ದಾರೆ. ಅವರ ಮೈಲಿಗಲ್ಲು ಸಂಶೋಧನೆ, ಯುವಕರಿಗೆ ಮಾರ್ಗದರ್ಶನ ನೀಡುವ ಬದ್ಧತೆ ಮತ್ತು ಪ್ರಾಯೋಗಿಕ ಹಾಗೂ ಹೊಸತನದ ಸಂಶೋಧನೆಗಳ ಮೂಲಕ ನಮ್ಮ ಜಗತ್ತನ್ನು ಸುಧಾರಿಸಲು ತೆಗೆದುಕೊಂಡ ಶ್ರಮಕ್ಕಾಗಿ ಅವರಿಗೆ ಪ್ರಶಸ್ತಿ ಸಂದಿದೆ’’ ಎಂದು ಮಂಗಳವಾರ ಹೊರಡಿಸಲಾದ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.


ಫೆಮ್ಟ ಫೋಟೊಗ್ರಫಿ ಹಾಗೂ ಅಭಿವೃದ್ಧಿಶೀಲ ಜಗತ್ತಿಗಾಗಿ ಅವರು ರೂಪಿಸಿದ ಕಡಿಮೆ ವೆಚ್ಚದ ಕಣ್ಣು ಆರೈಕೆ ವಿಧಾನಗಳು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿವೆ.
 ಪುಸ್ತಕವನ್ನು ತೆರೆಯದೆಯೇ ಒಳಗಿನ ಪುಟಗಳನ್ನು ಓದಲು ಸಾಧ್ಯವಾಗುವಂತೆ ಮಾಡುವ ಕ್ಯಾಮರವೊಂದನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News