×
Ad

ಟ್ರಾಕ್ ಏಷ್ಯಾ ಸೈಕ್ಲಿಂಗ್ ಕಪ್: ಮೊದಲ ದಿನ ಭಾರತಕ್ಕೆ ಮೂರು ಚಿನ್ನ

Update: 2016-09-14 23:44 IST

ಹೊಸದಿಲ್ಲಿ, ಸೆ.14: ಇಲ್ಲಿ ಆರಂಭಗೊಂಡ ಮೂರನೆ ಆವೃತ್ತಿಯ ಟ್ರಾಕ್ ಏಷ್ಯಾ ಸೈಕ್ಲಿಂಗ್ ಕಪ್‌ನ ಮೊದಲ ದಿನವಾದ ಬುಧವಾರ ಭಾರತ 3 ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದುಕೊಂಡಿದೆ. ಭಾರತದ ಸೈಕ್ಲಿಸ್ಟ್‌ಗಳು ಮೂರು ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಪಡೆದಿದ್ದಾರೆ.

ಚಿನ್ನದ ಪದಕವನ್ನು ಜಯಿಸಿದ ಭಾರತದ ದೆಬೋರಾ ಹೆರಾಲ್ಡ್ ಮಹಿಳೆೆಯರ 500 ಮೀ. ಎಲೈಟ್ ಸ್ಪರ್ಧೆಯಲ್ಲಿ ಮೊದಲ ಸ್ಥಾನದೊಂದಿಗೆ ಚಿನ್ನ ಪಡೆದರು. ದೆಬೋರಾ ಹಾಗೂ ಕೆಝಿಯ ವರ್ಗೀಸ್ ಟೀಮ್ ಸ್ಪ್ರಿಂಟ್ ಎಲೈಟ್ ಇವೆಂಟ್‌ನಲ್ಲಿ ಚಿನ್ನ ಗೆದ್ದುಕೊಂಡರು.

ಇದೇ ವೇಳೆ ನಯನಾ ರಾಜೇಶ್ ಮತ್ತು ಅನು ಚುಟಿಯಾ ಅವರನ್ನೊಳಗೊಂಡ ಮಹಿಳೆಯರ ಜೂನಿಯರ್ ತಂಡ ಚಿನ್ನ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News