×
Ad

ಬಿಜೆಪಿಗೆ ಸಿಧು ಅಧಿಕೃತ ರಾಜೀನಾಮೆ

Update: 2016-09-14 23:57 IST

ಚಂಡಿಗಡ, ಸೆ.14: ಕ್ರಿಕೆಟಿಗ-ರಾಜಕಾರಣಿ ನವಜೋತ್‌ಸಿಂಗ್ ಸಿಧು ಇಂದು ಬಿಜೆಪಿಗೆ ಔಪಚಾರಿಕವಾಗಿ ರಾಜೀನಾಮೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು, ಪಂಜಾಬ್‌ನಲ್ಲಿ ಹೊಸದಾದ ‘ರಾಜಕೀಯೇತರ’ ವೇದಿಕೆ ಯೊಂದರ ರಚನೆಯ ಘೋಷಣೆ ಮಾಡಿದ್ದರು.

ಜು.18ರಂದು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಸಿಧು, ಇಂದು ಬಿಜೆಪಿಗೆ ತನ್ನ ರಾಜೀನಾಮೆಯನ್ನು ಪಕ್ಷಾಧ್ಯಕ್ಷ ಅಮಿತ್ ಶಾರಿಗೆ ಕಳುಹಿಸಿದ್ದಾರೆ.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ತಾನು ಈ ಮೂಲಕ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷದೊಂದಿಗಿನ ಸುದೀರ್ಘ ಸಂಬಂಧದ ಹಿನ್ನೆಲೆಯಲ್ಲಿ ಇದು ನೋವಿನ ನಿರ್ಧಾರವಾಗಿದೆ. ತನಗೆ ಹೆಂಡತಿ, ಮಕ್ಕಳು, ಪಕ್ಷಕ್ಕಿಂತ ಪಂಜಾಬ್, ಪಂಜಾಬಿಯತ್ ಮುಖ್ಯವಾದುದು. ಪ್ರತಿಯೊಬ್ಬ ಪಂಜಾಬಿ ಗೆಲ್ಲಬೇಕು ಎಂದು ಸಿಧು ತನ್ನ ಪತ್ರದಲ್ಲಿ ಹೇಳಿದ್ದಾರೆ. ಆದಾಗ್ಯೂ, ಅವರ ಪತ್ನಿ, ಅಮೃತರಸರದ ಬಿಜೆಪಿ ಶಾಸಕಿ ನವಜೋತ್ ಕೌರ್ ಇನ್ನೂ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲವೆಂದು ಅವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News