ನೀರಿನ ಗಲಭೆ: 12 ಮಂದಿಗೆ ಗಾಯ
Update: 2016-09-14 23:59 IST
ಮುಝಫ್ಫರ್‌ನಗರ, ಸೆ.14: ಇಲ್ಲಿನ ಪಥೇರ್ ಗ್ರಾಮದಲ್ಲಿ ಕೈಪಂಪ್ ಒಂದರಿಂದ ನೀರು ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳೊಳಗೆ ನಡೆದ ಹೊಡೆದಾಟದಲ್ಲಿ 6 ಮಹಿಳೆಯರು ಸಹಿತ 12 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಕೈಪಂಪ್‌ನಿಂದ ನೀರು ಹಿಡಿಯುವ ವಿಷಯದಲ್ಲಿ ಉಮರುದ್ದೀನ್ ಹಾಗೂ ಝಿಯಾಉಲ್‌ಹಕ್ ಎಂಬವರ ನಡುವೆ ವಾಗ್ವಾದ ನಡೆದಿತ್ತು. ಆ ಬಳಿಕ ಅವರ ಬೆಂಬಲಿಗರು ದೊಣ್ಣೆ ಹಾಗೂ ಬಂದೂಕುಗಳಿಂದ ಹೊಡೆದಾಡಿ ಕೊಂಡರೆಂದು ಅವರು ಹೇಳಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.