×
Ad

ಲಿಬಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತದ ಇಬ್ಬರು ಪ್ರಾಧ್ಯಾಪಕರ ರಕ್ಷಣೆ

Update: 2016-09-15 11:18 IST

ಹೊಸದಿಲ್ಲಿ, ಸೆ.15: ಕಳೆದ ವರ್ಷ ಲಿಬಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತದ ಇಬ್ಬರು ಪ್ರಾಧ್ಯಾಪಕರನ್ನು ರಕ್ಷಿಸಲಾಗಿದೆ 2015ರ ಜುಲೈ ನಲ್ಲಿ ಅಪಹರಣಕ್ಕೊಳಗಾಗಿದ್ದ  ಆಂಧ್ರಪ್ರದೇಶದ ಗೋಪಾಲಕೃಷ್ಣ ಮತ್ತು ತೆಲಂಗಾಣದ ಬಲರಾಂಕಿಶನ್ ಎಂಬವರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.

ಸಿರ್ತೆ ವಿವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಒಟ್ಟು ನಾಲ್ವರು ಪ್ರಾಧ್ಯಾಪಕರನ್ನು  ಐಸಿಸ್‌ ಗೆ  ಸೇರಿದ ಸಂಘಟನೆಯ ಕಾರ್ಯಕರ್ತರು ಅಪಹರಿಸಿದ್ದರು. ಈ ಪೈಕಿ ಕರ್ನಾಟಕದ ರಾಯಚೂರ‍್ ನ ಲಕ್ಷ್ಮೀಕಾಂತ್‌ ರಾಮಕೃಷ್ಣ(37) ಮತ್ತು ಮುಳಬಾಗಿಲ್ ನ ವಿಜಯ್‌ ಕುಮಾರ್‌ (56) ಎಂಬರನ್ನು ಅಪಹರಣಕ್ಕೊಳಗಾದ ಕೆಲವೇ ದಿನಗಳಲ್ಲಿ ರಕ್ಷಿಸಲಾಗಿತ್ತು. ಆದರೆ ಆಂಧ್ರಪ್ರದೇಶದ ಗೋಪಾಲಕೃಷ್ಣ ಮತ್ತು ತೆಲಂಗಾಣದ ಬಲಾರಾಂಕಿಶನ್  ಈ ತನಕ ಅಪಹರಣಕಾರರ ವಶದಲ್ಲಿದ್ದರು.
ಭಾರತದ ನಾಲ್ವರು ಪ್ರಾಧ್ಯಾಪಕರು  ತವರಿಗೆ ವಾಪಸಾಗಲು ಕಾರ್‌ ನಲ್ಲಿ ತ್ರಿಪೊಲಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಅವರನ್ನು ಅಪಹರಿಸಲಾಗಿತ್ತು. 
ಆಗಸ್ಟ್‌ 2014ರಲ್ಲಿ ಉಗ್ರರ ಅಟ್ಟಹಾಸ ತೀವ್ರಗೊಂಡಾಗ ಲಿಬಿಯಾದ ವಿವಿಯಲ್ಲಿ ಉದ್ಯೋಗದಲ್ಲಿದ್ದ ಭಾರತದ ನೂರಾರು ಮಂದಿ ಶಿಕ್ಷಕರು ಭಾರತಕ್ಕೆ ವಾಪಸಾಗಿದ್ದರು. ಮುಚ್ಚಲ್ಪಟ್ಟ ವಿವಿ  ಸೆಪ್ಟಂಬರ‍್ 2014ರಲ್ಲಿ  ಬಾಗಿಲು ತೆರೆದಾಗ  ಶಿಕ್ಷಕರು ಮತ್ತೆ ಲಿಬಿಯಾಕ್ಕೆ ತೆರಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News