ತಾಂಝಾನಿಯದಲ್ಲಿ ಪತ್ತೆಯಾದ ಅವಶೇಷ ಎಂಎಚ್370 ವಿಮಾನದ್ದು

Update: 2016-09-15 15:27 GMT

ಕೌಲಾಲಂಪುರ, ಸೆ. 15: ತಾಂಝಾನಿಯ ಕರಾವಳಿಯ ಸಮುದ್ರದಲ್ಲಿರುವ ಪೆಂಬ ದ್ವೀಪದಲ್ಲಿ ಜೂನ್‌ನಲ್ಲಿ ಪತ್ತೆಯಾದ ವಿಮಾನ ಅವಶೇಷವೊಂದರ ಬೃಹತ್ ತುಂಡು ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನಕ್ಕೆ ಸೇರಿದ್ದು ಎಂಬುದನ್ನು ಮಲೇಶ್ಯ ಗುರುವಾರ ಖಚಿತಪಡಿಸಿದೆ.
239 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು 2014ರ ಮಾರ್ಚ್‌ನಲ್ಲಿ ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರುತ್ತಿದ್ದ ಬೋಯಿಂಗ್ 777 ಕಂಪೆನಿಯ ವಿಮಾನಕ್ಕಾಗಿ ಎರಡು ವರ್ಷಗಳಿಗೂ ಹೆಚ್ಚು ಅವಧಿಯಿಂದ ನಡೆಯುತ್ತಿರುವ ಶೋಧದಕ್ಕು ಹೆಚ್ಚಿನ ಸುಳಿವುಗಳೇನೂ ಪತ್ತೆಯಾಗಿಲ್ಲ.
ವಿಮಾನ ಯಾವ ಸನ್ನಿವೇಶದಲ್ಲಿ ನಾಪತ್ತೆಯಾಯಿತು ಎಂಬುದರ ಬಗ್ಗೆ ಏನಾದರೂ ಸುಳಿವುಗಳನ್ನು ನೀಡಬಹುದೇ ಎಂಬುದನ್ನು ತಿಳಿಯಲು ಪತ್ತೆಯಾದ ಅವಶೇಷವನ್ನು ಇನ್ನಷ್ಟು ತಪಾಸಣೆಗೆ ಒಳಪಡಿಸಲಾಗುವುದು ಎಂದು ಮಲೇಶ್ಯದ ಸಾರಿಗೆ ಸಚಿವ ಲಿಯೊವ್ ಟಿಯಾಂಗ್ ಲಾಯ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News