‘‘ಟ್ರಂಪ್ ಇಡೀ ಜಗತ್ತಿನ ಪಾಲಿಗೆ ಕಂಟಕ’’
ಫ್ರಾನ್ಸ್,ಸೆ.16 :ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನವೆಂಬರ್ ತಿಂಗಳಿನಲ್ಲಿ ನಡೆಯುವ ಚುನಾವಣೆಯಲ್ಲಿ ಗೆದ್ದದ್ದೇ ಆದರೆ ಅದು ಇಡೀ ಜಗತ್ತಿಗೆ ಕಂಟಕಪ್ರಾಯವಾಗಲಿದ್ದಾರೆ ಹಾಗೂ ಯುರೋಪ್ ನಲ್ಲಿ ಕಾಪಿಕ್ಯಾಟ್ ಗಳಿಗೆ ಉತ್ತೇಜನ ನೀಡುವುದು, ಎಂದು ಯುರೋಪಿಯನ್ ಪಾರ್ಲಿಮೆಂಟ್ ಅಧ್ಯಕ್ಷ ಮಾರ್ಟಿನ್ ಶುಲ್ಝ , ಜರ್ಮನಿಯ ಆನ್ ಲೈನ್ ನಿಯತಕಾಲಿಕ ಡೆರ್ ಸ್ಪೀಗಲ್ ಗೆನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘‘ಟ್ರಂಪ್ ಕೇವಲ ಯುರೋಪಿಯನ್ ಯೂನಿಯನ್ ಗೆ ಮಾತ್ರವಲ್ಲ ಇಡೀ ಜಗತ್ತಿನ ಪಾಲಿಗೇ ಕಂಟಕವಾಗಲಿದ್ದಾರೆ’’ ಎಂದು ಅವರು ಎಚ್ಚರಿಸಿದ್ದಾರೆ.
‘‘ವಿಶೇಷವಾದ ಜ್ಞಾನವನ್ನು ಗಣ್ಯರು ಹೇಳುವ ಅಸಂಬದ್ಧವೆಂದು ಹೇಳುವ ವ್ಯಕ್ತಿಯೊಬ್ಬ ಶ್ವೇತ ಭವನ ಪ್ರವೇಶಿಸಿದರೆ ಅದು ನಿರ್ಣಾಯಕ ಹಂತ ತಲುಪಿದಂತೆಯೇ ಸರಿ,’’ ಎಂದುಮಾರ್ಟಿನ್ ಹೇಳಿದ್ದಾರೆ.
‘‘ಇದರರ್ಥ ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾದಹುದ್ದೆಯೊಂದರಲ್ಲಿ ‘ಬೇಜವಾಬ್ದಾರಿ’ ವ್ಯಕ್ತಿಯೊಬ್ಬನಿದ್ದಾನೆಂದು ಅರ್ಥ,’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ‘‘ಇದೇ ಕಾರಣಕ್ಕೆ ನಾನು ಹಿಲರಿ ಕ್ಲಿಂಟನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಯಸುತ್ತೇನೆ’’ ಎಂದವರು ಹೇಳಿದರು.