ದಿಲ್ಲಿಯಲ್ಲಿ ಸಾಮೂಹಿಕ ಅತ್ಯಾಚಾರ: ನಾಲ್ವರ ಬಂಧನ
ಹೊಸದಿಲ್ಲಿ, ಸೆಪ್ಟಂಬರ್ 16: ಅಪ್ರಾಪ್ತ ವಯಸ್ಸಿನ ಬಾಲಕಿ ಸಹಿತ ಇಬ್ಬರನ್ನು ಐವರ ತಂಡವೊಂದು ಸಾಮೂಹಿಕ ಅತ್ಯಾಚಾರಕ್ಕೀಡಾಗಿಸಿದ ದಾರುಣ ಘಟನೆ ದಿಲ್ಲಿಯ ಅಮಲ್ ವಿಹಾರ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ದಿಲ್ಲಿ ಅಮಲ್ ವಿಹಾರ್‌ನ ಪ್ರೇಂನಗರ್ ಪಾರ್ಕಿನ ಸಮೀಪವಿರುವ ಕೃಷಿ ಸ್ಥಳದಲ್ಲಿ ಗುರುವಾರ ಸಂಜೆ ದುಷ್ಕರ್ಮಿಗಳು ಮಾನವತೆಯೇ ಕಂಪಿಸುವಂತಹ ಸಾಮೂಹಿಕ ಅತ್ಯಾಚಾರ ಕೃತ್ಯ ವೆಸಗಿದ್ದು, ಗೆಳೆಯರೊಂದಿಗೆ ಕೃಷಿ ಪಾರ್ಕ್ ಸಂದರ್ಶನಕ್ಕೆ ಬಂದಿದ್ದ ಹದಿನೇಳು,ಹದಿನೆಂಟು ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು ದುರುಳರು ತಮ್ಮ ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಹುಡುಗಿಯರ ಜೊತೆ ಇದ್ದ ಗಂಡಸರನ್ನು ಹೊಡೆದ ಬಳಿಕ ಇಬ್ಬರು ಹುಡುಗಿಯರ ಮೇಲೆ ತಂಡ ಅತ್ಯಾಚಾರ ವೆಸಗಿದೆ. ಅತ್ಯಾಚಾರಕ್ಕೊಳಗಾದ ಹುಡುಗಿಯರು ಪ್ರಜ್ಞೆ ಕಳಕೊಂಡಿದ್ದರು.
ಅವರ ಜೊತೆ ಇದ್ದ ಯುವಕರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದರು. ಸ್ವಲ್ಪಸಮಯದ ನಂತರ ಈ ಯುವಕರೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅತ್ಯಾಚಾರ ಆರೋಪಿಗಳಲ್ಲಿನಾಲ್ವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ವಿಕ್ರಂಜಿತ್ ಸಿಂಗ್ ಹೇಳಿದ್ದಾರೆ. ಇವರ ಕುರಿತು ಹೆಚ್ಚಿನ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ ಎಂದು ವರದಿ ತಿಳಿಸಿದೆ.