ಎಸ್ಪಿಯ ಪರಿ‘ವಾರ್’: ಅಖಿಲೇಶ್ ರ ಚಾಚಾ ಶಿವಪಾಲ್ ಯಾದವ್ ರಾಜೀನಾಮೆ
ಹೊಸದಿಲ್ಲಿ, ಸೆಪ್ಟಂಬರ್ 16: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ ಜಗಳ ತಾರಕ್ಕೇರಿದೆ ಎಂದು ವರದಿಯೊಂದು ತಿಳಿಸಿದೆ. ಯಾದವ್ ಕುಟುಂಬದ ಕಲಹ ಸಮಾಜವಾದಿ ಪಾರ್ಟಿಯನ್ನು ಅಲುಗಾಡಿಸುತ್ತಿದೆ. ಇದೀಗ ಮುಲಾಯಂ ಸಿಂಗ್ ಯಾದವ್‌ರ ತಮ್ಮ ಶಿವಪಾಲ್ ಯಾದವ್ ಸಮಾಜವಾದಿ ಪಾರ್ಟಿಯ ರಾಜ್ಯಘಟಕ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಲಾಯಂ ಸಿಂಗ್ ದಿಲ್ಲಿಯಿಂದ ಲಕ್ನೊ ತಲುಪಿದೊಡನೆ ಪಾರ್ಟಿಯ ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿದ ಪತ್ರವನ್ನು ಹಸ್ತಾಂತರಿಸಿದ್ದು, ಜಿಲ್ಲಾಸಹಕಾರಿ ಬ್ಯಾಂಕ್ ಅಧ್ಯಕ್ಷ ಪದವಿಯಿಂದ ಶಿವಪಾಲ್ ಪತ್ನಿ ಸರಳಾಮತ್ತು ಪ್ರಾದೇಶಿಕ ಸಹಕಾರಿ ಫೆಡರೇಷನ್ ಚೇರ್‌ಮೆನ್ ಸ್ಥಾನಕ್ಕೆ ಶಿವಪಾಲ್ ಪುತ್ರ ಆದಿತ್ಯ ಕೂಡಾ ರಾಜಿನಾಮೆ ನೀಡಿದ್ದಾರೆ.
ಆದರೆ ಮುಲಾಯಂ ಇವರ ರಾಜಿನಾಮೆಯನ್ನು ಸ್ವೀಕರಿಸಿಲ್ಲ ಎಂದುವರದಿ ತಿಳಿಸಿದೆ. ಶಿವಪಾಲ್‌ರ ಪ್ರೀತಿಪಾತ್ರರಾಗಿದ್ದ ದೀಪಕ್ ಸಿಂಗ್‌ರನ್ನು ಸರಕಾರದ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ಅಖಿಲೇಶ್ ತೆಗೆದು ಹಾಕುವುದರೊಂದಿಗೆ ಅಖಿಲೇಶ್ ಮತ್ತು ಶಿವಪಾಲ್‌ನಡುವೆ ಜಗಳ ಆರಂಭವಾಗಿತ್ತು. ಇಬ್ಬರು ದೂರನ್ನು ಸಮಾಜವಾದಿ ಪಾರ್ಟಿ ಸುಪ್ರಿಮೊ ಮುಲಾಯಂಸಿಂಗ್ ಬಳಿ ಒಯ್ದಿದ್ದರು. ಮುಲಾಯಂ ಸಿಂಗ್ ರಾಜ್ಯಘಟಕದ ಅಧ್ಯಕ್ಷ ಸ್ಥಾನದಿಂದ ಅಖಿಲೇಶ್‌ರನ್ನು ಕಿತ್ತುಹಾಕಿ ಆಸ್ಥಾನದಲ್ಲಿ ಶಿವಪಾಲ್ ಯಾದವ್‌ರನ್ನು ಪ್ರತಿಷ್ಠಾಪಿಸಿದ್ದರು. ಇದಕ್ಕೆ ಅತೃಪ್ತಿವ್ಯಕ್ತಪಡಿಸಿದ ಅಖಿಲೇಶ್ ಯಾದವ್ ಚಿಕ್ಕಪ್ಪನ ಕೈಯಲ್ಲಿದ್ದ ಕೆಲವು ಖಾತೆಗಳನ್ನು ಕಿತ್ತುಕೊಂಡಿದ್ದರು. ತನ್ನನ್ನು ಅವಮಾನಿಸಲಾಗಿದೆ ಆದ್ದರಿಂದ ಸಚಿವರಾಗಿ ತಾನುಮುಂದುವರಿಯಲಾರೆ ಎಂದು ಶಿವಪಾಲ್ ರಾಜಿನಾಮೆ ಸಲ್ಲಿಸಿದ್ದಾರೆ.
ಕೇವಲ ಮುಲಾಯಂಸಿಂಗ್‌ರನ್ನು ಮಾತ್ರವೇ ತಾನು ನಾಯಕನಾಗಿ ಅಂಗೀಕರಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.ಮುಖ್ಯಮಂತ್ರಿಸ್ಥಾನದಿಂದ ಅಖಿಲೇಶ್‌ರ ತೆಗೆದು ಮುಲಾಯಂಸ್ವತಃ ಮುಖ್ಯಮಂತ್ರಿಸ್ಥಾನವಹಿಸಿಕೊಳ್ಳಬೇಕೆಂದು ಶಿವಪಾಲ್ ಆಗ್ರಹಿಸಿದ್ದಾರೆ. ಆದರೆ ಮುಲಾಯಂರ ಇನ್ನೊಬ್ಬ ತಮ್ಮನಾದ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್‌ಗೋಪಾಲ್ ಯಾದವ್ ಅಖಿಲೇಶ್‌ರ ಬೆಂಬಲಕ್ಕೆ ನಿಂತಿದ್ದಾರೆ. ಈ ರೀತಿ ಯಾದವ್ ಕುಟುಂಬ ಕಲಹ ಸಮಾಜವಾದಿ ಪಾರ್ಟಿಯನ್ನು ಕಾಡುತ್ತಿದೆ ಎಂದು ವರದಿತಿಳಿಸಿದೆ.