×
Ad

ಮೃತದೇಹವನ್ನು ಕೆಲವು ಮೀಟರ್ ಎಳೆದೊಯ್ದ ಪೊಲೀಸರು !

Update: 2016-09-16 14:11 IST

ವೈಶಾಲಿ, ಸೆ.16: ಬಿಹಾರದಲ್ಲಿ ವೈಶಾಲಿಯಲ್ಲಿ ಪೊಲೀಸರು ಮೃತದೇಹದ ಕೊರಳಿಗೆ ಹಗ್ಗಕಟ್ಟಿ ಕೆಲವು ಮೀಟರ್‌ಗಳವರೆಗೆ ಎಳೆದೊಯ್ದ ಅಮಾನವೀಯ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೈಶಾಲಿಯ ಗಂಗಾನದಿಯಲ್ಲಿ ಮೃತನಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಮೃತದೇಹದೊಂದಿಗೆ ಹೀಗೆ ಪೊಲೀಸರು ಅಗೌರವದಿಂದ ವರ್ತಿಸಿರುವುದು ಈಗ ವಿವಾದವಾಗಿದೆ.

ಊರವರು ಸುದ್ದಿ ಮುಟ್ಟಿಸಿದ ಬಳಿಕ ಎರಡು ಗಂಟೆ ತಡವಾಗಿ ಬಂದ ಪೊಲೀಸರು ಮೃತದೇಹವನ್ನು ಹೊಳೆಯಿಂದ ಮೇಲೆತ್ತಿ ಅದನ್ನು ಜನರು ನಿಂತು ನೋಡುತ್ತಿದ್ದಂತೆ ದರದರನೆ ಕೆಲವು ಮೀಟರ್‌ವರೆಗೆ ಎಳೆದು ಒಯ್ದು ವಾಹನಕ್ಕೆ ಎತ್ತಿಹಾಕಿದ್ದಾರೆ. ಆ್ಯಂಬುಲೆನ್ಸ್ ಮತ್ತುಇತರ ಕೆಲಸದವರು ಸಿಗದ್ದರಿಂದ ಅನಿವಾರ್ಯವಾಗಿ ಹೀಗೆ ಮಾಡಬೇಕಾಯಿತೆಂದು ಪೊಲೀಸರು ಸ್ಪಷ್ಟಣೆ ನೀಡಿದ್ದಾರೆ.

ಘಟನೆ ಬೆಳಕಿಗೆ ಬಂದ ಮೇಲೆ ಇಬ್ಬರು ಪೊಲೀಸರನ್ನು ಹಿರಿಯ ಅಧಿಕಾರಿಗಳು ಅಮಾನತು ಗೊಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಕೂಡಾ ಇದೇರೀತಿ ಪೊಲೀಸರು ಮೃತದೇಹವೊಂದನ್ನುಎಳೆದೊಯ್ದು ವಾಹನಕ್ಕೆ ಎತ್ತಿಹಾಕಿದ್ದ ಘಟನೆ ವರದಿಯಾಗಿತ್ತು. ಕಳೆದ ತಿಂಗಳು ಹಲವು ಮೀಟರ್‌ವರೆಗೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು ಹೆಗಲಲ್ಲಿ ಹೊತ್ತು ನಡೆದುಕೊಂಡು ಹೋದ ಘಟನೆ ಕೂಡಾ ಬಿಹಾರದಿಂದ ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News