ಜಿಶಾ ಕೊಲೆ ಪ್ರಕರಣ: ನಾಳೆ ಆರೋಪ ಪಟ್ಟಿ ಸಲ್ಲಿಸಲಿರುವ ಪೊಲೀಸರು

Update: 2016-09-16 09:52 GMT

ಕೊಚ್ಚಿ,ಸೆಪ್ಟಂಬರ್ 16: ಪೆರುಂಬಾವೂರಿನ ಜಿಶಾ ಕೊಲೆ ಪ್ರಕರಣದಲ್ಲಿ ಶನಿವಾರ ಕೋರ್ಟಿಗೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲಿದ್ದಾರೆಂದು ವರದಿಯೊಂದು ತಿಳಿಸಿದೆ. ಸೌಮ್ಯಾ ಕೊಲೆಕೇಸಿನಲ್ಲಿ ಸುಪ್ರೀಂಕೋರ್ಟು ತೀರ್ಪು ಬಂದ ನಂತರ ಅತೀವ ಜಾಗ್ರತೆ ವಹಿಸಿ ಪೊಲೀಸರು ಜಿಶಾ ಕೊಲೆಪ್ರಕರಣದ ಆರೋಪ ಪಟ್ಟಿ ತಯಾರಿಸಿ ಕೋರ್ಟಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಕೆಲವು ಸಾಕ್ಷ್ಯಗಳ ಅಭಾವ ಇರುವುದರಿಂದ ಪ್ರಕರಣ ದುರ್ಬಲವಾಗಲಿದೆ ಎಂಬ ಆರೋಪ ಈಹಿಂದೆ ಕೇಳಿಬಂದಿವೆ. ಈ ನಡುವೆ ಪೊಲೀಸರು ಪ್ರಕರಣದ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಲಿದ್ದಾರೆ. ಕೇಸಿನ ವಿಜಿಲೆನ್ಸ್ ತನಿಖೆ ಆರಂಭವಾಗಿ ಕಾನೂನು ಪ್ರಕಾರ ಲಭ್ಯವಾದ ಸಮಯಾವಧಿ ಕೊನೆಗೊಳ್ಳುವ ಘಟ್ಟದಲ್ಲಿದ್ದು ಪೊಲೀಸರು ಆರೋಪ ಪಟ್ಟಿಯನ್ನು ಶನಿವಾರ ಕೋರ್ಟಿಗೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಡಿಎನ್‌ಎ ಮುಂತಾದ ವೈಜ್ಞಾನಿಕ ಸಾಕ್ಷ್ಯಗಳು ಇರುವುದರಿಂದ ಪ್ರಕರಣದ ಆರೋಪ ಪಟ್ಟಿಯಲ್ಲಿ ಯಾವ ಲೋಪವೂ ಎದುರಾಗದೆಂದು ಪೊಲೀಸರಲ್ಲಿ ತುಂಬು ವಿಶ್ವಾಸ ವಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News