×
Ad

2.25 ಕೋಟಿರೂ. ಮೌಲ್ಯದ 900 ಐಫೋನ್ ಗಳನ್ನು ಕದ್ದ ಕಳ್ಳರ ಸೆರೆ

Update: 2016-09-16 15:42 IST

ಹೊಸದಿಲ್ಲಿ,ಸೆ.16: ಟ್ರಕ್ ಡ್ರೈವರನ್ನು ಕಟ್ಟಿಹಾಕಿ 900ರಷ್ಟು ಐಫೋನ್‌ಗಳನ್ನು ಕದ್ದ ಇಬ್ಬರು ಕಳ್ಳರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮೆಹ್ತಾಬ್ ಆಲಂ(25),ಅ ರ್ಮಾನ್(22) ಎಂಬ ಇಬ್ಬರು ಕಳ್ಳರು 2.25 ಕೋಟಿರೂಪಾಯಿ ಮೌಲ್ಯದ ಐಫೋನ್ 5ಎಸ್ ಮಾಡೆಲ್‌ಗಳನ್ನು ದೋಚಿ ಪರಾರಿಯಾಗಿದ್ದರು. ಕದ್ದ ಫೋನ್‌ಗಳನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಮೆಹ್ತಾಬ್ ಆಲಂನನ್ನು ಮಹೀಪಾಲ್‌ಪುರ್‌ನಲ್ಲಿ ಮತ್ತು ಅರ್ಮಾನ್‌ನ್ನು ರಂಗ್‌ಪೂರ್‌ನಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಿಂಗಳು ಹದಿಮೂರನೆ ತಾರೀಕಿಗೆದಿಲ್ಲಿಯ ಓಕ್ಲಾದಿಂದ ದ್ವಾರಕಾಕ್ಕೆ ಐಫೋನ್ ಸಾಗಾಟ ನಡೆಸುತ್ತಿದ್ದವೇಳೆ ಟ್ರಕ್‌ಡ್ರೈವರನನ್ನು ಬಂಧಿಯಾಗಿಸಿ ಈ ಇಬ್ಬರು ದೋಚಿದ್ದರು ಎಂದು ಡೆಪ್ಯುಟಿ ಪೊಲೀಸ್ ಕಮೀಶನರ್ ಈಶ್ವರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News