ಗೋವಿಂದಚಾಮಿ ಗಲ್ಲುಶಿಕ್ಷೆ ರದ್ದುಪಡಿಸಿದ ಸುಪ್ರೀಂಕೋರ್ಟು ತೀರ್ಪಿನ ವಿರುದ್ಧ ಪ್ರತಿಕ್ರಿಯಿಸಿದ ನ್ಯಾ.ಕಾಟ್ಜು!

Update: 2016-09-16 11:56 GMT

ಹೊಸದಿಲ್ಲಿ,ಸೆಪ್ಟಂಬರ್ 16: ಸೌಮ್ಯಾ ಕೊಲೆಪ್ರಕರಣದಲ್ಲಿ ಗೋವಿಂದಚಾಮಿಯ ಗಲ್ಲುಶಿಕ್ಷೆಯನ್ನು ರದ್ದಪಡಿಸಿದ ಸುಪ್ರೀಂಕೋರ್ಟಿನ ಕ್ರಮದ ವಿರುದ್ಧ ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಪ್ರತಿಕ್ರಿಯೆ ನೀಡಿದ್ದಾರೆ.

ಸಂಶಯಗಳ ಆಧಾರದಲ್ಲಿ ಗಲ್ಲುಶಿಕ್ಷೆಯಿಂದ ಗೋವಿಂದಚಾಮಿಯನ್ನು ಹೊರತುಪಡಿಸಿರುವುದನ್ನು ಅಂಗೀಕರಿಸಲು ಸಾಧ್ಯವಿಲ್ಲ. ತನ್ನ ತೀರ್ಪನ್ನು ಸುಪ್ರೀಂಕೋರ್ಟು ಮರುಪರಿಶೀಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಫೇಸ್ ಬುಕ್‌ನಲ್ಲಿ ಈ ಕುರಿತು ಅವರು ಪ್ರತಿಕ್ರಿಯೆ ಬರೆದಿದ್ದು, ಟಿವಿಗೆ ನೀಡಿದ ಸಂದರ್ಶನದಲ್ಲಿಯೂ ಈವಿಷಯವನ್ನು ಸ್ಪಷ್ಟಪಡಿಸಿದ್ದೇನೆ ಎಂದು ಜಸ್ಟಿಸ್ ಕಟ್ಜು ಹೇಳಿದ್ದಾರೆ.

ಸುಪ್ರೀಂಕೋರ್ಟು ಐಪಿಸಿ300ನೆ ಕಲಂಪ್ರಕಾರ ಕೋರ್ಟು ವಿವರವಾಗಿ ಪರಿಶೀಲನೆ ನಡೆಸದೆ ಮತ್ತು ಪರಿಗಣಿಸದೆ ಶಿಕ್ಷೆ ರದ್ದುಪಡಿಸಿದೆ. ಇತ್ಯಾದಿ ಕಾನೂನಾತ್ಮಕ ಲೋಪಗಳು ಆಗಿವೆ ಎಂದು ಕಾಟ್ಜು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News