×
Ad

ವಿಶ್ವ ದಾಖಲೆ ಮುರಿದ ಚೀನಾದ ವಾಂಗ್‌ಗೆ ಚಿನ್ನ

Update: 2016-09-16 23:45 IST

ರಿಯೋ ಡಿಜನೈರೊ, ಸೆ.16: ರಿಯೋ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಮಹಿಳೆಯರ ಶಾಟ್‌ಪುಟ್‌ನ ಎಫ್-35 ವಿಭಾಗದ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯನ್ನು ಮುರಿದ ಚೀನಾದ ವಾಂಗ್ ಜುನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದುಕೊಂಡಿದ್ದಾರೆ.

ಗುರುವಾರ ಇಲ್ಲಿ ನಡೆದ ಶಾಟ್‌ಪುಟ್ ಸ್ಪರ್ಧೆಯಲ್ಲಿ 26ರ ಪ್ರಾಯದ ವಾಂಗ್ 13.91 ಮೀ.ದೂರ ಶಾಟ್‌ಪುಟ್‌ನ್ನು ಎಸೆದರು. ಈ ಮೂಲಕ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಉಕ್ರೇನ್‌ನ ಮಾರಿಯಾ ಪೊಮಝನ್ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು(13.05ಮೀ.) ಮುರಿದರು.

ಪೊಮಝನ್ ಪ್ಯಾರಾಲಿಂಪಿಕ್ಸ್‌ನಲ್ಲಿ 13.59 ಮೀ. ಶಾಟ್‌ಪುಟ್‌ನ್ನು ಎಸೆದು ಬೆಳ್ಳಿ ಪದಕವನ್ನು ಜಯಿಸಿದರೆ, ಬ್ರೆಝಿಲ್‌ನ ಮರಿವಾನ ಒಲಿವೆರಾ(9.28 ಮೀ.)ಕಂಚಿನ ಪದಕವನ್ನು ಜಯಿಸಿದ್ದಾರೆ.

ಪೊಮಝನ್ 2008ರ ಬೀಜಿಂಗ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಆ ಗೇಮ್ಸ್‌ನಲ್ಲಿ ಎಪ್42-46 ವಿಭಾಗದಲ್ಲಿ ಬಂಗಾರ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News