×
Ad

ಜಾಹೀರಾತಿಗೆ ಖರ್ಚು ಮಾಡಿದ ಹಣ ‘ಆಪ್’ನಿಂದ ವಸೂಲಿ ಮಾಡಬೇಕು: ಕೇಂದ್ರ ಸರಕಾರದ ಸಮಿತಿ

Update: 2016-09-17 13:06 IST

ನವದೆಹಲಿ, ಸೆ.17: ದೆಹಲಿಯ ಕೇಜ್ರಿವಾಲ್ ಸರಕಾರ ಹಾಗೂ ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಹಣಾಹಣಿಗೆ ಸಿದ್ಧವಾಗಿದೆ. ಸರಕಾರಿ ಜಾಹೀರಾತುಗಳಲ್ಲೊದಗಿಸಲಾಗುವ ಮಾಹಿತಿ ಸಂಬಂಧ ಸುಪ್ರೀಂ ಕೋರ್ಟ್ ಕಳೆದ ವರ್ಷ ನೀಡಿದ್ದ ಕೆಲವೊಂದು ಮಾರ್ಗಸೂಚಿಗಳನ್ನು ಆಡಳಿತ ಆಮ್ ಆದ್ಮಿ ಪಕ್ಷವು ಉಲ್ಲಂಘಿಸಿದೆಯೆಂದು ಆರೋಪಿಸಿರುವ ಕೇಂದ್ರ ಸರಕಾರದಿಂದ ನೇಮಿತವಾದ ಸಮಿತಿಯೊಂದು ಸರಕಾರಿ ಜಾಹೀರಾತಿಗೆ ದೆಹಲಿ ಸರಕಾರ ಖರ್ಚು ಮಾಡಿದ ಹಣವನ್ನು ಆಮ್ ಆದ್ಮಿ ಪಕ್ಷದಿಂದ ವಸೂಲಿ ಮಾಡಬೇಕು ಎಂದು ಹೇಳಿದೆ.

ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ಅವರ ಪಕ್ಷದ ಪ್ರಚಾರಕ್ಕಾಗಿ ದೆಹಲಿ ಸರಕಾರಸರಕಾರಿ ಹಣವನ್ನು ಉಪಯೋಗಿಸಿದೆ ಎಂದು ಸಮಿತಿ ಆರೋಪಿಸಿದೆ. ಈ ಸಮಿತಿಯ 17 ಪುಟಗಳ ವರದಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್, ದೆಹಲಿ ಸರಕಾರದ ಮುಖ್ಯ ಕಾರ್ಯದರ್ಶಿ, ದೆಹಲಿ ಹೈಕೋರ್ಟಿನ ರಿಜಿಸ್ಟ್ರಾರ್ ಹಾಗೂ ದೂರುದಾರರಾದ ಕಾಂಗ್ರೆಸ್ ನಾಯಕ ಅಜನ್ ಮಾಕನ್ ಅವರಿಗೆ ಕಳುಹಿಸಲಾಗಿದೆ.
ಈ ತ್ರಿಸದಸ್ಯ ಸಮಿತಿಯಲ್ಲಿ ಪತ್ರಕರ್ತ ಹಾಗೂ ಪಿಯೂಶ್ ಪಾಂಡೆ ಇದ್ದು ಅದರ ನೇತೃತ್ವವನ್ನು ಮಾಜಿ ಮುಖ್ಯ ಚುನಾವಣಾ ಕಮಿಷನರ್ ಬಿ.ಬಿ.ಟಂಡನ್‌ ವಹಿಸಿದ್ದರು. ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಈ ಸಮಿತಿಯನ್ನು ವಾರ್ತಾ ಮತ್ತು ಪ್ರಸಾ ಸಚಿವಾಲಯ ಈ ವರ್ಷದ ಎಪ್ರಿಲ್ 26ರಂದು ರಚಿಸಿತ್ತು. ತನಗೆ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರಿಂದ ಮೇ 11ರಂದು ಎಎಪಿಯ ಉಲ್ಲಂಘನೆಗಳ ಬಗ್ಗೆ ದೂರು ಬಂದಿತ್ತೆಂದು ಸಮಿತಿ ತಿಳಿಸಿದೆ. ತಮ್ಮ ದೂರಿನಲ್ಲ ಮಾಕನ್ ಅವರು ಎಎಪಿ ಸರಕಾರ ಒಂಬತ್ತು ವಿಧದಲ್ಲಿ ಸುಪ್ರೀಂ ಕೋರ್ಟ್ ನಿಯಮಾವಳಿ ಉಲ್ಲಂಘಿಸಿದೆ ಎಂದು ಹೇಳಿದ್ದರು. ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ವರದಿಯ ಸೋಗಿನಲ್ಲಿ ಪ್ರಕಟಣೆ, ತಪ್ಪುದಾರಿಗೆಳೆಯುವ ಜಾಹೀರಾತುಗಳು, ಕೆಲ ಮಾಧ್ಯಮ ಗುಂಪುಗಳಿಗೆ ಅನುಕೂಲಕರ ಜಾಹೀರಾತುಗಳನ್ನು ನೀಡುವುದು ಇತ್ಯಾದಿ ಉಲ್ಲಂಘನೆಗಳನ್ನು ದೂರಿನಲ್ಲಿ ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News