ಭಾರತ ಅತ್ಯಾಚಾರವೆಸಗುವವರ ದೇಶ ಎಂದು ಕೇಳಿಬರುವುದರಿಂದ ನಾಚಿಕೆ ಆಗುತ್ತಿದೆ: ಅಮಿತಾಭ್

Update: 2016-09-17 08:11 GMT

ಹೊಸದಿಲ್ಲಿ,ಸೆಪ್ಟಂಬರ್ 17: ಹೊರದೇಶಗಳಿಗೆ ಹೋದಾಗ ಭಾರತವನ್ನು ಅತ್ಯಾಚಾರಿಗಳ ರಾಷ್ಟ್ರವೆಂದು ಕರೆಯುವುದು ಕೇಳಿಸುತ್ತಿದೆ, ಇದರಿಂದ ತನಗೆ ಲಜ್ಜೆಪಡುವ ಸ್ಥಿತಿ ಎದುರಾಗಿದೆ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ. ವಿದೇಶಗಳನ್ನು ಸಂದರ್ಶಿಸುವಾಗ “ತಾವು ಅತ್ಯಾಚಾರಿಗಳ ನಾಡಾದ ಭಾರತದವರೋ” ಎಂಬಂತಹ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಇದು ಹೆಚ್ಚು ಕಿರಿಕಿರಿಯುಂಟುಮಾಡುತ್ತದೆ.

ಭಾರತವನ್ನು ಮೂರನೆ ಜಗತ್ತಿನ ದೇಶ ಮತ್ತು ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರವೆಂದು ಹೇಳುವುದನ್ನು ಕೇಳುವಾಗಲೂ ಕೂಡಾ ಬೇಸರವಾಗುತ್ತದೆ. ತಾನು ಭಾರತವನ್ನು ಮುಂದುವರಿದ ಜಾಗತಿಕ ದೇಶಗಳ ಸಾಲಿನಲ್ಲಿ ನೋಡಲು ಇಚ್ಛಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News