ಚೆಲ್ಸಿಯಾ ನಗರದಲ್ಲಿ ಸ್ಫೋಟ; 29 ಜನರಿಗೆ ಗಾಯ

Update: 2016-09-18 06:01 GMT

ನ್ಯೂಯಾರ್ಕ್‌, ಸೆ.18: ನ್ಯೂಯಾರ್ಕ್‌ ಪಕ್ಕದ ಚೆಲ್ಸಿಯಾ ನಗರದಲ್ಲಿ ಶನಿವಾರ ತಡರಾತ್ರಿ ನಡೆದ ಬಾಂಬ್‌ ಸ್ಪೋಟದ ಪರಿಣಾಮ 29ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಸ್ಫೋಟ ಹೇಗೆ ನಡೆದಿದೆ ಎಂದು ತಕ್ಷಣ ಗೊತ್ತಾಗಿಲ್ಲ.  ಇದು ಉಗ್ರರ ದಾಳಿಯೋ ಎನ್ನುವುದು ಗೊತ್ತಾಗಿಲ್ಲ. ಉಗ್ರರ ಕೈವಾಡದ ಬಗ್ಗೆ ತನಿಖೆ ನಡೆಸಲಾಗುತ್ತಿದೆ .ಪ್ರವಾಸಿಗರು  ಮತ್ತು ಸ್ಥಳೀಯರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News