ನಾಳೆಯಿಂದ ಪ್ರೌಢಶಾಲಾ ಶಿಕ್ಷಕರ ಕೌನ್ಸೆಲಿಂಗ್

Update: 2016-09-18 18:30 GMT

ಉಡುಪಿ, ಸೆ.18: ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ವಿಭಾಗ ವ್ಯಾಪ್ತಿಯ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯ ಆನ್‌ಲೈನ್ ಕೌನ್ಸೆಲಿಂಗ್ ಸೆ.20ರಿಂದ 23ರವರೆಗೆ ನಡೆಯಲಿದೆ. ಕೌನ್ಸೆಲಿಂಗ್ ವೇಳೆ ಸಲ್ಲಿಸಬೇಕಾದ ಪೂರಕ ದಾಖಲೆಗಳ ವಿವರಗಳನ್ನು ಇಲಾಖೆಯ ವೆಬ್‌ಸೈಟ್ www.schooleducation.kar.nic.inನಲ್ಲಿ ಪ್ರಕಟಿಸಲಾಗಿದೆ.

ಆನ್‌ಲೈನ್ ಕೌನ್ಸೆಲಿಂಗ್‌ಗೆ ಹಾಜರಾಗುವ ಶಿಕ್ಷಕರ ಆದ್ಯತಾ ಕ್ರಮಾಂಕಗಳು ಇಂತಿವೆ. ಸೆ.20ರಂದು ಆದ್ಯತಾ ಕ್ರಮಾಂಕ 1ರಿಂದ 400ರವರೆಗಿನ ಸಹ ಶಿಕ್ಷಕರು, 21ರಂದು 401ರಿಂದ 850ರವರೆಗಿನ ಸಹಶಿಕ್ಷಕರು, 22ರಂದು 851ರಿಂದ 1,350ರವರೆಗಿನ ಸಹಶಿಕ್ಷಕರು ಹಾಗೂ ಸೆ.23ರಂದು 1351ರಿಂದ 1749ರವರೆಗಿನ ಸಹಶಿಕ್ಷಕರು, 1ರಿಂದ 175 ಆದ್ಯತಾ ಕ್ರಮಾಂಕಗಳ ಗ್ರೇಡ್-1 ದೈಹಿಕ ಶಿಕ್ಷಕರು ಹಾಗೂ 1ರಿಂದ 92 ಆದ್ಯತಾ ಕ್ರಮಾಂಕಗಳ ವಿಶೇಷ ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗುವಂತೆ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News