ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯನ್ನು ಅತ್ಯಾಚಾರವೆಸಗಿ ಹೊರಗೆಸೆದರು !

Update: 2016-09-19 05:27 GMT

ಮಾವು,ಸೆಪ್ಟಂಬರ್ 19: ಉತ್ತರಪ್ರದೇಶದ ಮಾವು ಜಿಲ್ಲೆಯಲ್ಲಿ ಮೂವತ್ತೈದುವರ್ಷದ ಮಹಿಳೆಯೊಬ್ಬರನ್ನು ಇಬ್ಬರು ದುಷ್ಕರ್ಮಿಗಳು ಸೇರಿ ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರವೆಸಗಿ ನಂತರ ಹೊರಗೆಸೆದ ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.ಕೇರಳದ ಸೌಮ್ಯಾಳನ್ನು ಚಲಿಸುವ ರೈಲಿನಲ್ಲಿ ಅತ್ಯಾಚಾರವೆಸಗಿ ರೈಲಿನಿಂದ ಹೊರಗೆಸೆದ ಗೋವಿಂದಚಾಮಿಕೃತ್ಯಕ್ಕೆಸಮಾನವಾದ ಘಟನೆ ಇದೆಂದು ವರದಿಗಳು ವಿಶ್ಲೇಷಿಸಿವೆ.

ಶಹನ್‌ಗಂಜಿನಲ್ಲಿರುವ ತನ್ನ ಮನೆಗೆ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಜೌನ್‌ಪುರ್ ಜಿಲ್ಲೆಯ ಬಳಿ ಇಬ್ಬರು ಪುರುಷರು ಅತ್ಯಾಚಾರ ವೆಸಗಿ ಮಹಿಳೆಯನ್ನು ಹೊರಗೆ ತಳ್ಳಿದ್ದಾರೆ ಎನ್ನಲಾಗಿದೆ. ಖಝಾಕುರ್ದ್ ರೈಲ್ವೆ ಸ್ಟೇಶನ್ ಸಮೀಪ ನಗ್ನವಾಗಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ರವಿವಾರ ಬೆಳಗ್ಗೆ ನೋಡಿದ್ದಾರೆ. ಕೂಡಲೇ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯ ಆರೋಗ್ಯಸ್ಥಿತಿ ಗಂಭೀರವಾಗಿ ಹದಗೆಟ್ಟದ್ದರಿಂದ ನಂತರ ವಾರಣಾಸಿಆಸ್ಪತ್ರೆಗೆ ನಂತರ ಕರೆದೊಯ್ಯಲಾಗಿದೆ.

ಇಬ್ಬರು ಪುರುಷರು ತನ್ನನ್ನು ಬಲಾತ್ಕರಿಸಿ ರೈಲಿನಿಂದ ಹೊರಗೆ ಎಸೆದಿದ್ದಾರೆ ಎಂದು ತಿಳಿಸಿದ್ದರೂ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದು ಇನ್ನೂದೃಢೀಕರಣಗೊಂಡಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News