ಸಾಮ್ರಾಟ್ ಅಶೋಕನ ಜಯಂತಿ ಮತ್ತು ಪುಣ್ಯತಿಥಿಯ ಮಾಹಿತಿ ನೀಡುವಂತೆ ಕೇಂದ್ರಕ್ಕೆ ಆದೇಶ
Update: 2016-09-19 20:07 IST
ಹೊಸದಿಲ್ಲಿ,ಸೆ.19: ಸಾಮ್ರಾಟ್ ಅಶೋಕನ ಜಯಂತಿ ಮತ್ತು ಪುಣ್ಯತಿಥಿಯ ದಿನಾಂಕಗಳು ಮತ್ತು ಆ ದಿನಗಳನ್ನು ಆಚರಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿಗಳನ್ನು ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗವು ಕೇಂದ್ರದ ರಕ್ಷಣಾ,ವಿತ್ತ,ಗೃಹ ಮತ್ತು ಸಂಸ್ಕೃತಿ ಸಚಿವಾಲಯಗಳಿಗೆ ಆದೇಶಿಸಿದೆ.
ಅರುಣ ಕುಮಾರ್ ಎನ್ನುವವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥುರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಸಾಮ್ರಾಟ್ ಅಶೋಕನ ಜಯಂತಿ ಮತ್ತು ಪುಣ್ಯತಿಥಿಯ ದಿನಾಂಕಗಳನ್ನು, ಅವುಗಳನ್ನು ಆಚರಿಸಲಾಗುತ್ತಿದೆಯೇ ಎಂಬ ಬಗ್ಗೆ ಹಾಗೂ ಅವುಗಳ ಆಚರಣೆಗೆ ಸಂಬಂಧಿಸಿದ ಕ್ರಿಯಾ ಯೋಜನೆಯ ಬಗ್ಗೆ ಮಾಹಿತಿಗಳನ್ನು ಪ್ರಧಾನಿ ಕಚೇರಿಯಿಂದ ಕೋರಿದ್ದಾರೆ.
ಅಶೋಕ ವೌರ್ಯ ವಂಶದ ಮೂರನೇ ಸಾಮ್ರಾಟನಾಗಿದ್ದು, ಕ್ರಿಪೂ 304ರಲ್ಲಿ ಜನಿಸಿದ್ದ ಆತ ಕ್ರಿಪೂ 232ರಲ್ಲಿ ನಿಧನನಾಗಿದ್ದ.