ಸ್ಕೈಪ್’ನ ಲಂಡನ್ ಕಚೇರಿ ಮುಚ್ಚಲು ಮೈಕ್ರೊಸಾಫ್ಟ್ ನಿರ್ಧಾರ: 400 ಉದ್ಯೋಗಿಗಳ ಉದ್ಯೋಗ ಕಡಿತ?
ಲಂಡನ್, ಸೆ. 19: ತಂತ್ರಜ್ಞಾನ ದೈತ್ಯ ಮೈಕ್ರೊಸಾಫ್ಟ್ ‘ಸ್ಕೈಪ್’ನ ಲಂಡನ್ ಕಚೇರಿಯನ್ನು ಮುಚ್ಚಲು ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಸುಮಾರು 400 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಉದ್ದೇಶಿಸಿದೆ ಎಂದು ಇಲ್ಲಿ ಮಾಧ್ಯಮ ವರದಿಯೊಂದು ತಿಳಿಸಿದೆ.
‘‘ಕೆಲವು ಇಂಜಿನಿಯರಿಂಗ್ ಹುದ್ದೆಗಳನ್ನು ವಿಲೀನಗೊಳಿಸಲು ಮೈಕ್ರೊಸಾಫ್ಟ್ ನಿರ್ಧರಿಸಿದೆ ಹಾಗೂ ಇದು ‘ಸ್ಕೈಪ್’ ಮತ್ತು ‘ಯಮ್ಮರ್’ಗಳಲ್ಲಿರುವ ಉದ್ಯೋಗಗಳಿಗೆ ಸಂಚಕಾರ ಒಡ್ಡುವ ಅಪಾಯವಿದೆ’’ ಎಂದು ಮೈಕ್ರೊಸಾಫ್ಟ್ ಅಧಿಕಾರಿಗಳನ್ನು ಉಲ್ಲೇಖಿಸಿ ‘ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ.
ಆದಾಗ್ಯೂ, ಸ್ಕೈಪ್ ರೆಡ್‌ಮಂಡ್, ಪಲೊ ಅಲ್ಟೊ, ವ್ಯಾಂಕೂವರ್ ಹಾಗೂ ಯುರೋಪ್‌ನ ಕೆಲವು ಸ್ಥಳಗಳು ಸೇರಿದಂತೆ ವಿಶ್ವಾದ್ಯಂತ ಹಲವಾರು ಸ್ಥಳಗಳ್ಲಲ್ಲಿ ಕಚೇರಿಗಳನ್ನು ನಡೆಸಲಿದೆ.
ಸ್ಕೈಪ್ ಮೇಲಿನ ನಿಯಂತ್ರಣವನ್ನು ಮೈಕ್ರೊಸಾಫ್ಟ್ ದಿನೇ ದಿನೇ ಹೆಚ್ಚಿಸುತ್ತಿದ್ದು, ಅದರ ಉದ್ಯೋಗಿಗಳ ಸ್ಥಾನಗಳಲ್ಲಿ ತನ್ನದೇ ಉದ್ಯೋಗಿಗಳನ್ನು ನೇಮಿಸುತ್ತಿದೆ ಎಂದು ಸ್ಕೈಪ್‌ನ ಮಾಜಿ ಉದ್ಯೋಗಿಗಳು ಹೇಳುತ್ತಾರೆ.
ದೊಡ್ಡ ಮಟ್ಟದ ಆರಂಭಿಕ ಧ್ವನಿ ಕರೆ ಆ್ಯಪ್‌ಗಳ ಪೈಕಿ ಸ್ಕೈಪ್ ಕೂಡ ಒಂದು. ಆದರೆ, ಈಗ ಅದು ಇತರ ಪ್ರಭಾವಶಾಲಿ ಆ್ಯಪ್‌ಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದೆ.