ಅಮೆರಿಕದ ಚಾಂಪಿಯನ್ ಸಿಮೊನ್‌ರನ್ನು ಮಣಿಸುವ ಗುರಿ: ದೀಪಾ

Update: 2016-09-19 17:59 GMT

ಕೋಲ್ಕತಾ, ಸೆ.19: ರಿಯೋ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ ವೋಲ್ಟ್ ವಿಭಾಗದಲ್ಲಿ ನಾಲ್ಕನೆ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದ ಭಾರತದ ಜಿಮ್ನಾಸ್ಟ್ ತಾರೆ ದೀಪಾ ಕರ್ಮಾಕರ್ 2020ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಅಮೆರಿಕದ ಸಿಮೋನ್ ಬಿಲೆಸ್‌ರನ್ನು ಮಣಿಸುವ ಗುರಿ ಹಾಕಿಕೊಂಡಿದ್ದಾರೆ.

ಟೋಕಿಯೊ 2020ರಲ್ಲಿ ಸಿಮೋನ್‌ರನ್ನು ಮಣಿಸುವುದು ನನ್ನ ಮುಂದಿರುವ ಗುರಿ. ಚಾಂಪಿಯನ್‌ನ್ನು ಮಣಿಸಿದರೆ, ಕೊನೆ ಪಕ್ಷ ಚಿನ್ನ ಇಲ್ಲವೇ ಬೆಳ್ಳಿ ಪದಕ ಜಯಿಸಬಹುದು ಎಂದು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನದ ಕಿರೀಟದೊಂದಿಗೆ ಸನ್ಮಾನಿಸಲ್ಪಟ್ಟ ದೀಪಾ ಹೇಳಿದ್ದಾರೆ.

ಒಲಿಂಪಿಕ್ಸ್‌ನ ಬಳಿಕ ದೇಶದ ವಿವಿಧೆಡೆ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ದೀಪಾ, ಕಳೆದ ಎರಡು ವಾರಗಳ ಹಿಂದೆಯೇ ನನ್ನ ಫಿಟ್‌ನೆಸ್ ತರಬೇತಿ ಆರಂಭವಾಗಿದೆ ಎಂದು ಹೇಳಿದ್ದಾರೆ.

 ‘‘ಪ್ರತಿ ಕ್ರೀಡೆಯಲ್ಲೂ ಅಪಾಯವಿರುತ್ತದೆ. ಕ್ರಿಕೆಟ್‌ನಲ್ಲಿ ಚೆಂಡು ಬಂದು ತಲೆಗೆ ಅಪ್ಪಳಿಸಿದರೆ ಏನೂ ಕೂಡ ಆಗಬಹುದು. ನಾನು ಕ್ರೀಡೆಯಲ್ಲಿ ಎಷ್ಟು ಪಳಗಿದ್ದೇವೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ನನ್ನ ಕೋಚ್‌ರೊಂದಿಗೆ ಕಠಿಣ ತರಬೇತಿ ನಡೆಸುತ್ತಿರುವ ಕಾರಣ ನನಗೆ ಯಾವುದೇ ಭಯವಿಲ್ಲ’’ ಎಂದು ದೀಪಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News