ಜರ್ಮನಿಯಲ್ಲಿ ನಾಝಿಗಳು ಮರಳಿ ಬರುತ್ತಿದ್ದಾರೆಯೇ?

Update: 2016-09-20 06:20 GMT

ಬರ್ಲಿನ್,ಸೆಪ್ಟಂಬರ್ 20: ತೀವ್ರ ಬಲಪಂಥೀಯ ಪಾರ್ಟಿ ಆಲ್ಟ್ರನೇಟಿವ್ ಫಾರ್ ಜರ್ಮನಿ ಪಾರ್ಟಿ ಎಂಬ ಎಎಫ್‌ಡಿ ಪಾರ್ಟಿ ಬರ್ಲಿನ್ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆದಿದ್ದು, ಇದು ನಾಝಿಗಳ ಮರುಪ್ರವೇಶದ ಸೂಚನೆಯೆಂದು ಅಭಿಪ್ರಾಯ ವ್ಯಕ್ತವಾಗಿದೆ. ಚಾನ್ಸಲರ್ ಏಂಜೆಲಾ ಮರ್ಕಲ್‌ರ ಕ್ರೈಸ್ತ ಡೆಮಕ್ರಾಟ್ ಪಾರ್ಟಿಗಾದ ಹಿನ್ನಡೆಗೆ ಎಎಫ್‌ಡಿ ಪ್ರಚಾರಗಳೇ ಕಾರಣವಾಗಿದೆ ಎಂದು ವರದಿಯಾಗಿದೆ. ಇತ್ತೀಚಿಗಿನ ಕಾಲದಲ್ಲಿ ಯುರೋಪ್‌ನ ಬಹುದೊಡ್ಡ ರಾಜಕೀಯ ಚರ್ಚೆಯಾಗಿ ಪರಿವರ್ತನೆಗೊಂಡಿರುವ ನಿರಾಶ್ರಿತರ ಸಮಸ್ಯೆಯಲ್ಲಿ ಮರ್ಕಲ್ ಮತ್ತು ಅವರ ಪಕ್ಷ ಮಾನವೀಯ ನಿಲುವನ್ನು ಸ್ವೀಕರಿಸಿದೆ. ಆದರೆ ಮರ್ಕಲ್‌ರ ನಿಲುವಿನ ವಿರುದ್ಧ ಮತ್ತು ಇಸ್ಲಾಮೋಫೋಬಿಯ ಕುರಿತ ಪ್ರಚಾರದ ಮೂಲಕ ಬಲಪಂಥೀಯ ಪಾರ್ಟಿ ಎಎಫ್‌ಡಿ ಬರ್ಲಿನ್‌ನಲ್ಲಿ ಬಲವೃದ್ಧಿಸಿಕೊಂಡಿದೆ.

ಇದಕ್ಕೆ ಜನರ ಬೆಂಬಲ ಸಿಕ್ಕಿರುವುದನ್ನು ಜರ್ಮನಿಯ ಪೂರ್ವ ರಾಜ್ಯಗಳಲ್ಲಿ ಒಂದಾದ ಬರ್ಲಿನ್‌ನಲ್ಲಿ ನಡೆದ ಚುನಾವಣೆ ಫಲಿತಾಂಶ ಸೂಚಿಸುತ್ತಿದೆ. ಕೆಲವು ದಿವಸಗಳಿಗೆ ಮೊದಲು ಬರ್ಲಿನ್ ಮೇಯರ್ ಮೈಕಲ್ ಮುಲ್ಲರ್ ಬಲಪಂಥೀಯರು ಬಲವರ್ಧಿಸಿಕೊಂಡಿರುವುದನ್ನು ಬೆಟ್ಟು ಮಾಡಿ ತೋರಿಸಿ ಎಚ್ಚರಿಸಿದ್ದರು. ಜರ್ಮನಿಯಲ್ಲಿ ನಾಝಿಗಳ ಮರು ಪ್ರವೇಶ ಆಗುತ್ತಿದೆ ಎಂದು ಎಎಫ್‌ಡಿಗೆ ಸಿಕ್ಕ ಮುನ್ನಡೆಯನ್ನು ಉದ್ಧರಿಸಿ ಜಾಗತಿಕಮಟ್ಟದಲ್ಲಿ ಅಭಿಪ್ರಾಯ ವ್ಯಕ್ತವಾಗಬಹುದೆಂದು ಬರ್ಲಿನ್ ಮೇಯರ್ ಮುನ್ನೆಚ್ಚರಿಕೆ ನೀಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News