×
Ad

ತ.ನಾ.ಮಾಜಿ ಸಾರಿಗೆ ಸಚಿವನ ವಿರುದ್ಧದ ಎಫ್‌ಐಆರ್ ರದ್ದು

Update: 2016-09-20 19:23 IST

ಮದುರೈ,ಸೆ.20: 2014ರಲ್ಲಿ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗದ ಭರವಸೆ ನೀಡಿ 38 ಜನರಿಂದ 61 ಲ.ರೂ.ಗಳನ್ನು ಪಡೆದುಕೊಂಡು ವಂಚಿಸಿದ್ದ ಆರೋಪದಲ್ಲಿ ರಾಜ್ಯದ ಮಾಜಿ ಸಾರಿಗೆ ಸಚಿವ ವಿ.ಸೆಂಥಿಲ್ ಬಾಲಾಜಿ ಮತ್ತು ನಿಗಮದ ಆಡಳಿತ ನಿರ್ದೇಶಕ ರಂಗರಾಜನ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ರದ್ದುಗೊಳಿಸಿದೆ.

 ಪ್ರಕರಣದಲ್ಲಿ ಬಾಲಾಜಿ ಮತ್ತು ರಂಗರಾಜನ್ ಭಾಗಿಯಾಗಿದ್ದಾರೆ ಎಂದು ಶಂಕಿಸಲೂ ಸಾಕ್ಷಾಧಾರಗಳಿಲ್ಲ ಎಂದು ಹೇಳಿದ ನ್ಯಾ.ಎಸ್.ವಿಮಲಾ ಅವರು, ಬಾಲಾಜಿ ಹೆಸರನ್ನು ಬಳಸಿಕೊಂಡು ತನ್ನ ಬ್ಯಾಂಕ್ ಖಾತೆಯಲ್ಲಿ ಹಣ ಸಂಗ್ರಹಿಸಿದ್ದಕ್ಕಾಗಿ ದೂರುದಾರ ಯು.ಸುಬ್ಬಯ್ಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾ ಕ್ರೈಂ ಬ್ರಾಂಚ್ ಪೊಲೀಸರಿಗೆ ನಿರ್ದೇಶ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News