×
Ad

ಈ 13 ದೇಶಗಳ ಪಾಸ್ ಪೋರ್ಟ್‌ಗಿದೆ ವಿಶೇಷ ಪವರ್!

Update: 2016-09-21 12:50 IST

ಸ್ವಿಜರ್‌ಲ್ಯಾಂಡ್‌ನ ಪೌರತ್ವವನ್ನು ನೀವು ಪಡೆದಿದ್ದರೆ ನಿಮಗೆ ಪ್ರಯಾಣದ ಅದ್ಭುತ ಶಕ್ತಿ ಸಿಗಲಿದೆ. ಸ್ವೀಡನ್ ವಾಸಿಗಳು ವೀಸಾ ಇಲ್ಲದೆಯೇ 157 ದೇಶಗಳಿಗೆ ಪ್ರಯಾಣಿಸುವ ಅವಕಾಶ ಪಡೆದಿದ್ದಾರೆ. ಇದರಿಂದ ಅವರಿಗೆ ಅಂತಾರಾಷ್ಟ್ರೀಯ ಪ್ರಯಾಣಗಳು ಅಗ್ಗವಾಗುತ್ತವೆ ಮತ್ತು ಇತರ ಹಲವಾರು ದೇಶಗಳಿಗೆ ಹೋಲಿಸಿದರೆ ವಿದೇಶಿ ಪ್ರಯಾಣ ಅವರಿಗೆ ಬಹಳ ಸುಲಭಸಾಧ್ಯವಾಗುತ್ತದೆ. ಅಫ್ಘಾನಿಸ್ತಾನದಂತಹ ದೇಶಗಳ ಪ್ರಜೆಗಳು ವೀಸಾ ಇಲ್ಲದೆ ಕೇವಲ 24 ದೇಶಗಳಿಗಷ್ಟೇ ಪ್ರಯಾಣಿಸಬಹುದೆನ್ನುವ ವಾಸ್ತವದ ಹಿನ್ನೆಲೆಯಲ್ಲಿ ಸ್ವಿಜರ್‌ಲ್ಯಾಂಡ್ ಪ್ರಜೆಗಳಿಗೆ ಅತ್ಯುತ್ತಮ ಪ್ರಯಾಣ ಶಕ್ತಿ ದೊರೆತಿದೆ.

ವೀಸಾವಿಲ್ಲದ ವಿದೇಶಿ ಪ್ರಯಾಣ ಮಾಡುವ ಅವಕಾಶವಿರುವ ದೇಶಗಳಿಗೆ ರ್ಯಾಂಕ್ ನೀಡಿರುವ ಪಾಸ್‌ಪೋರ್ಟ್ ಇಂಡೆಕ್ಸ್ ಮೂಲಕ ಈಗ ಅಫ್ಘಾನಿಸ್ತಾನ ಮತ್ತು ಸ್ವಿಜರ್‌ಲ್ಯಾಂಡ್ ಪ್ರಜೆಗಳ ನಡುವಿನ ಈ ವ್ಯತ್ಯಾಸವು ಬಹಿರಂಗವಾಗಿದೆ. ಮೊದಲೇ ಅಥವಾ ತಲುಪಿದ ಮೇಲೆ ವೀಸಾ ಖರೀದಿ ಅಗತ್ಯವಿಲ್ಲದೆ ಎಷ್ಟು ದೇಶಗಳಿಗೆ ಯಾವ ದೇಶಗಳು ಪ್ರಯಾಣ ಬೆಳೆಸಬಹುದು ಎನ್ನುವುದನ್ನು ಪಾಸ್‌ಪೋರ್ಟ್ ಇಂಡೆಕ್ಸ್ ವಿಶ್ಲೇಷಿಸಿದೆ. ಜಾಗತಿಕ ಹಣಕಾಸು ಸಲಹೆಗಾರ ಸಂಸ್ಥೆ ಆರ್ಟನ್ ಕ್ಯಾಪಿಟಲ್ 193 ದೇಶಗಳು ಮತ್ತು ಆರು ಪ್ರದೇಶಗಳ ಸರ್ಕಾರಗಳ ವಿವರಗಳನ್ನು ಪಡೆದುಕೊಂಡು 2016ರ ರ್ಯಾಂಕಿಂಗ್ ಸಿದ್ಧಪಡಿಸಿದೆ. ಈ ರ್ಯಾಂಕಿಂಗ್ ನಲ್ಲಿ ಮೊದಲ 13 ಸ್ಥಾನಗಳನ್ನು ಗಳಿಸಿದ ದೇಶಗಳು ಮತ್ತು ಅಲ್ಲಿನ ಪ್ರಜೆಗಳು ವೀಸಾವಿಲ್ಲದೆ ಎಷ್ಟು ದೇಶಗಳಿಗೆ ಪ್ರಯಾಣಿಸಬಹುದು ಎನ್ನುವ ವಿವರ ಇಲ್ಲಿದೆ.

13. ನಾರ್ವೆ- 156 ದೇಶಗಳು

12. ದಕ್ಷಿಣ ಕೊರಿಯ - 156 ದೇಶಗಳು

11. ಬೆಲ್ಜಿಯಂ- 156 ದೇಶಗಳು

10. ನೆದರ್ಲಾಂಡ್ಸ್- 156 ದೇಶಗಳು

9. ಇಟಲಿ- 156 ದೇಶಗಳು

8. ಡೆನ್ಮಾರ್ಕ್- 156 ದೇಶಗಳು

7. ಬ್ರಿಟನ್- 157 ದೇಶಗಳು

6. ಸ್ಪೇನ್- 157 ದೇಶಗಳು

5. ಸ್ವಿಜರ್‌ಲ್ಯಾಂಡ್- 157 ದೇಶಗಳು

4. ಫ್ರಾನ್ಸ್- 157 ದೇಶಗಳು

3. ಫಿನ್ಲಾಂಡ್- 157 ದೇಶಗಳು

2. ಸ್ವೀಡನ್- 158 ದೇಶಗಳು

1. ಜರ್ಮನಿ- 158 ದೇಶಗಳು

ಕೃಪೆ: http://www.businessinsider.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News