×
Ad

ಈ ವಿದ್ಯಾರ್ಥಿ ಸಂಶೋಧಿಸಿರುವ ಬ್ಯಾಟರಿಯ ಆಯುಷ್ಯ ಎಷ್ಟು ಶತಮಾನ ಗೊತ್ತೇ?

Update: 2016-09-21 23:30 IST

ಸಿದ್ಧತೆ ಅವಕಾಶವನ್ನು ಸಂಧಿಸಿದಾಗಲೇ ಅದೃಷ್ಟ ಕೂಡಿ ಬರುವುದು ಎನ್ನಲಾಗುತ್ತದೆ. ಇದಕ್ಕೆ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಮ್ಯಾ ಲೆ ಥಾಯ್ ನಡೆಸಿದ ಇತ್ತೀಚೆಗಿನ ಅನ್ವೇಷಣೆಗಿಂತ ದೊಡ್ಡ ಉದಾಹರಣೆ ಮತ್ತೊಂದಿಲ್ಲ. ಇವರ ಪ್ರಯೋಗವೊಂದು 400 ವರ್ಷಗಳವರೆಗೂ ಧೀರ್ಘ ಬಾಳಿಕೆ ಇರುವ ರಿಚಾರ್ಜ್ ಮಾಡುತ್ತಲೇ ಇರಬಹುದಾದ ಬ್ಯಾಟರಿಯೊಂದನ್ನು ಪತ್ತೆ ಮಾಡಿದೆ. ಇದರಿಂದಾಗಿ ಧೀರ್ಘ ಕಾಲ ಬಾಳಿಕೆ ಬರುವ ಲ್ಯಾಪ್‌ಟಾಪ್ ಗಳು ಮತ್ತು ಸ್ಮಾರ್ಟ್ ಫೋನ್‌ಗಳು ಬರಬಹುದು ಮತ್ತು ಕೆಲವೇ ಲಿತಿಯಂ ಅಯಾನ್ ಬ್ಯಾಟರಿಗಳು ತ್ಯಾಜ್ಯಕ್ಕೆ ಹೋಗಲಿವೆ.

ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ಬ್ಯಾಟರಿಗಳಲ್ಲಿ ನ್ಯಾನೋ ವೈರ್‌ಗಳನ್ನು ಬಳಸುವ ಬಗ್ಗೆ ಅಧ್ಯಯನ ನಡೆಸುತ್ತಿದೆ. ಆದರೆ ಕಾಲದ ಹೊಡೆತಕ್ಕೆ ಈ ತೆಳುವಾದ ದುರ್ಬಲ ವೈರ್‌ಗಳು ಮುರಿದು ಹೋಗಬಹುದು. ಹಲವು ಚಾರ್ಜಿಂಗ್ ಸೈಕಲ್ ನಂತರ ಇವು ಉಳಿಯುವುದಿಲ್ಲ. ಬ್ಯಾಟರಿ ಪೂರ್ಣ ತುಂಬಿದಲ್ಲಿಂದ ಖಾಲಿಯಾಗುವ ಮಟ್ಟಕ್ಕೆ ಬಂದಾಗ ಮರಳಿ ತುಂಬಲು ಚಾರ್ಜ್ ಮಾಡಲಾಗುತ್ತದೆ. ಆದರೆ ವಿದ್ಯಾರ್ಥಿ ಥಾಯ್ ಚಿನ್ನದ ನ್ಯಾನೋ ವೈರ್‌ಗಳ ಸೆಟ್ ಅನ್ನು ಮ್ಯಾಂಗನೀಸ್ ಡೈ ಆಕ್ಸೈಡ್ ಮತ್ತು ಪ್ಲೆಕ್ಸಿಗ್ಲಾಸ್‌ನಂತಹ ಇಲೆಕ್ಟ್ರೋಲೈಟ್ ಜೆಲ್‌ನಲ್ಲಿ ಕೋಟ್ ಮಾಡಲಿಟ್ಟರು. "ಈ ಜೆಲ್ ಕ್ಯಾಪಸಿಟರ್‌ಗಳನ್ನು ಅವರು ಚಾರ್ಜಿಂಗ್ ಸೈಕಲಿಗೆ ಒಡ್ಡಿದರು. ಆಗಲೇ ಅಚ್ಚರಿಯ ಪರಿಣಾಮ ಸಿಕ್ಕಿದೆ. ಈ ವಸ್ತು 10,000 ಸೈಕಲ್ಸ್ ನಲ್ಲಿ ಪ್ರಯತ್ನಿಸಿದರೂ ನಂತರವೂ ಉಳಿದಿರುವುದು ಕಂಡಿದೆ. ಕೆಲ ದಿನಗಳ ನಂತರ ಬಂದು ನೋಡಿದರೆ 30,000 ಸೈಕಲ್ಸ್ ಪೂರೈಸಿದೆ. ಇದು ತಿಂಗಳವರೆಗೆ ಹೋಯಿತು" ಎಂದು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಇಲಾಖೆಯ ಅಧ್ಯಕ್ಷ ರೆಜಿನಾಲ್ಡ್ ಪೆನ್ನರ್ ಹೇಳಿದ್ದಾರೆ.

ಇದು ಒಂದು ಅದ್ಭುತ ಅನ್ವೇಷಣೆಯಾಗಿದೆ. ಏಕೆಂದರೆ ಸರಾಸರಿ ಲ್ಯಾಪ್‌ಟಾಪ್ ಬ್ಯಾಟರಿ 300ರಿಂದ 500 ಚಾರ್ಜ್ ಸೈಕಲ್ ಅಷ್ಟೇ ಬರುತ್ತದೆ. ಯುಸಿಐನಲ್ಲಿ ತಯಾರಿಸಿದ ನ್ಯಾನೋ ಬ್ಯಾಟರಿ 2,00,000 ಸೈಕಲ್ಸ್‌ವರೆಗೆ ಮೂರು ತಿಂಗಳಲ್ಲಿ ಬಂದಿದೆ. ಹೀಗಾಗಿ ಸಾಮಾನ್ಯ ಲ್ಯಾಪ್‌ಟಾಪ್ ಬ್ಯಾಟರಿಯ ಸರಾಸರಿಯನ್ನು 400 ವರ್ಷಗಳಿಗೆ ಇದು ವಿಸ್ತರಿಸಲಿದೆ. ಉಳಿದ ಸಾಧನ ಹಾಳಾಗಿ ಹೋದರೂ ಬ್ಯಾಟರಿ ಮಾತ್ರ ಬಾಳಿಕೆ ಬರಲಿದೆ. ಆದರೆ ನೂರಾರು ವರ್ಷ ಬಾಳಿಕೆ ಬರುವ ಬ್ಯಾಟರಿ ಇರುವುದು ನಿಜಕ್ಕೂ ಅದ್ಭುತ ವಿಷಯ.

"ನಾವು ಅಧ್ಯಯನ ಮಾಡಿರುವ ನ್ಯಾನೋ ವೈರ್‌ಗಳ ಸ್ಥಿರತೆಗೆ ಸರಳ ದಾರಿಯಿದೆ. ಇದು ವಾಸ್ತವದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾದಲ್ಲಿ ಸಮಾಜಕ್ಕೆ ಅತೀ ದೊಡ್ಡ ಕೊಡುಗೆಯಾಗಲಿದೆ" ಎನ್ನುತ್ತಾರೆ ಪೆನ್ನರ್. ಇದೊಂದು ಪ್ರಯೋಗಾಲಯದ ವಿಸ್ಮಯವಾಗದೆ ವಾಸ್ತವದಲ್ಲಿ ಕಾರ್ಯನಿರ್ವಹಿಸಿದರೆ ಮಾನವಕುಲಕ್ಕೆ ಉಪಯೋಗವಾಗಲಿದೆ.

https://www.good.is

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News