×
Ad

ಕಾಶ್ಮೀರಕ್ಕೆ ಟರ್ಕಿಯಿಂದ ಸತ್ಯಶೋಧನಾ ಸಮಿತಿ

Update: 2016-09-21 15:36 IST

ನ್ಯೂಯಾರ್ಕ್, ಸೆ.21: ಇಸ್ಲಾಮಿಕ್ ಸಹಕಾರ ಸಂಸ್ಥೆಯ (ಒಐಎ) ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ರಾಷ್ಟ್ರವಾಗಿ ಕಾಶ್ಮೀರಕ್ಕೆ ಸತ್ಯಶೋಧನಾ ತಂಡವನ್ನು ಕಳುಹಿಸಲು ಟರ್ಕಿ ನಿರ್ಧರಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯಸಭೆ ಅಧಿವೇಶನಕ್ಕೆ ಇಲ್ಲಿಗೆ ಆಗಮಿಸಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಬ್ ಎರ್ದೊಗಾನ್ ಅವರು ಪಾಕಿಸ್ತಾನಿ ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿ ಮಾಡಿದ ಬಳಿಕ ಈ ವಿಷಯ ಪ್ರಕಟಿಸಿದರು.

"ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯೀಬ್ ಎರ್ದೊಗಾನ್ ಅವರನ್ನು ಭೇಟಿ ಮಾಡಿದ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಅವರು, ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿರುವ ವಿಷಯವನ್ನು ಪ್ರಸ್ತಾಪಿಸಿದರು" ಎಂದು ಡಾನ್ ನ್ಯೂಸ್ ವರದಿ ಮಾಡಿದೆ. ಟರ್ಕಿಯ ಬೆಂಬಲಕ್ಕಾಗಿ ಶರೀಫ್ ಕೃತಜ್ಞತೆ ಸಲ್ಲಿಸಿದ್ದಾರೆ ಎಂದೂ ವರದಿ ಹೇಳಿದೆ.

ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಝ್ ಅಝೀಝ್, ವಿಶೇಷ ಸಹಾಯಕ ತಾರಿಕ್ ಫತೇಮಿ, ಟರ್ಕಿ ವಿದೇಶಾಂಗ ಸಚಿವರು ಹಾಗೂ ಇತರ ಅಧಿಕಾರಿಗಳು ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.

"ಟರ್ಕಿ ಹಾಗೂ ಪಾಕಿಸ್ತಾನ ಅವಿಭಾಜ್ಯ ಸಂಬಂಧವನ್ನು ಹೊಂದಿದ್ದು, ಸದಾ ಮಿತ್ರದೇಶಗಳು" ಎಂದು ಉಭಯ ದೇಶಗಳ ಅಧಿಕಾರಿಗಳು ಬಣ್ಣಿಸಿದ್ದಾರೆ. ಈ ಭಾಗದಲ್ಲಿ ಹಾಗೂ ಮುಸ್ಲಿಂ ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವ ದೃಷ್ಟಿಯಿಂದ ಟರ್ಕಿ ಸದಾ ನೆರವು ನೀಡುತ್ತದೆ ಎಂದು ಎರ್ದೊಗಾನ್ ಭರವಸೆ ನೀಡಿದ್ದಾರೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News