×
Ad

ಪಾಕಿಸ್ತಾನ ಉಗ್ರ ರಾಷ್ಟ್ರವೆಂದು ಘೋಷಿಸಲು ಅಮೆರಿಕ ಸೆನೆಟ್ ಸಿದ್ಧ

Update: 2016-09-21 15:45 IST

ವಾಷಿಂಗ್ಟನ್, ಸೆಪ್ಟಂಬರ್ 21: ಅಮೆರಿಕದ ಸೆನೆಟ್‌ನಲ್ಲಿಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಗೊತ್ತುವಳಿ ಮಂಡಿಸಲುಸಿದ್ಧತೆ ನಡೆಯುತ್ತಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಅಮೆರಿಕನ್ ಕಾಂಗ್ರೆಸ್ ಸದಸ್ಯ ಭಯೋತ್ಪಾದನಾ ವಿರೋಧಿ ಉಪಸಮಿತಿ ಅಧ್ಯಕ್ಷರಾದ ಟೆಡ್ ಪೊ, ಡೆಮಕ್ರಾಟಿಕ್ ಪಾರ್ಟಿ ನಾಯಕ ಟನ ರೊಹ್ರಾಬಾಚ್ಚರ್ ಪಾಕಿಸ್ತಾನದ ವಿರುದ್ಧ ರಂಗಕ್ಕಿಳಿದಿದ್ದಾರೆಂದು ವರದಿಯಾಗಿದೆ.

ಪಾಕಿಸ್ತಾನ ಕೆಲವು ಸಮಯದಿಂದ ಅಮೆರಿಕದ ಶತ್ರುಗಳಿಗೆ ನೆರವು ಮತ್ತು ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ. ಭಯೋತ್ಪಾದನೆಗೆ ಸಂಬಂಧಿಸಿದ ವಿಷಯದಲ್ಲಿಪಾಕಿಸ್ತಾನ ಯಾವ ಪಕ್ಷ ವಹಿಸುತ್ತಾ ಬಂದಿದೆ ಎಂಬುದಕ್ಕೆ ಹಲವಾರು ಪುರಾವೆಗಳಿದ್ದು, ಇದು ಕೇವಲ ಅಮೆರಿಕಕ್ಕೆ ಮಾತ್ರ ಸಂಬಧಿಸಿದ ವಿಷಯವಲ್ಲ ಎಂದು ಟೆಡ್ ಅಭಿಪ್ರಾಯಿಸಿದ್ದಾರೆ.

  ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರವೆಂಬ ವಿಷಯವನ್ನು ಪ್ರಸ್ತುತ ಪಡಿಸಿದ ಕಾನೂನು ತಿದ್ದುಪಡಿ ತರುವ ಗೊತ್ತುವಳಿಯನ್ನು ಯುಎಸ್ ಕಾಂಗ್ರೆಸ್‌ನಲ್ಲಿ ಮಂಡಿಸಲಾಗಿದೆ ಎಂಬ ವರದಿಗಳೂ ಕೇಳಿಬರುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಕ್ರಮಗಳನ್ನು ಅನುಸರಿಸುತ್ತಿದೆ ಎಂಬುದಕ್ಕೆ ಸಂಬಂಧಿಸಿ 90 ದಿವಸಗಳೊಳಗೆ ಅಧ್ಯಕ್ಷರು ವರದಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಮೂವತ್ತು ದಿವಸಗಳ ಬಳಿಕ ಸ್ಟೇಟ್ ಕಾರ್ಯದರ್ಶಿ ಒಂದು ಮುಂದುವರಿದ ವರದಿಯನ್ನು ಸಮರ್ಪಿಸಲಿದ್ದಾರೆ. ಭಯೋತ್ಪಾದನೆಗೆ ಒತ್ತಾಶೆ ನೀಡುವ ಪಾಕಿಸ್ತಾನದ ವಿರುದ್ಧ ಭಾರತ ಪ್ರಕಟಿಸುವ ನಿಲುವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲಿಸಲು ಈ ಕ್ರಮಕ್ಕೆ ಅಮೆರಿಕ ಮುಂದಾಗಿದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News