ಪಂಜಾಬ್ ಚುನಾವಣಾ ಅಖಾಡದಲ್ಲಿ ಸಿಧು ಕಾಮಿಡಿ ಷೋ

Update: 2016-09-22 05:00 GMT

ಅಮೃತಸರ್,ಸೆ.22: ಪ್ರಾಯಶಃ ಇಂತಹ ಒಂದು ಶಾಟ್ ಅನ್ನು ನವಜೋತ್ ಸಿಂಗ್ ಸಿಧು ಭಾರತದ ಪರವಾಗಿ ಓಪನಿಂಗ್ ಬ್ಯಾಟ್ಸ್‌ಮೆನ್ ಆಗಿ ಯಾವತ್ತೂ ಆಡಿರಲಿಕ್ಕಿಲ್ಲ. ತಮ್ಮ ಆಕ್ರಮಣಕಾರಿ ಶಾಟ್ ಗಳಿಗೆ ಅವರು ಹೆಸರಾದವರು. ಆದರೆ ಬುಧವಾರದಂದು ರಾಜಕೀಯ ಅಖಾಡದಲ್ಲಿ ರಿವರ್ಸ್ ಸ್ವೀಪ್ ಹೊಡೆದೇ ಬಿಟ್ಟಿದ್ದಾರೆ. ತಾವು ಕೆಲ ದಿನಗಳ ಹಿಂದೆಆರಂಭಿಸಿದ ‘ಆವಾಝ್ ಎ ಪಂಜಾಬ್’ ರಾಜಕೀಯ ಪಕ್ಷ ಅಲ್ಲಎಂದು ಈ ಮಾಜಿ ಬಿಜೆಪಿ ಸಂಸದ ಇದೀಗ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಸಂಘಟನೆ ಬಾದಲ್-ಅಮರಿಂದರ್ ಮೈತ್ರಿ ಮುರಿಯಲು ಯಾರೊಂದಿಗೆ ಬೇಕಾದರೂ ಮೈತ್ರಿಗೆ ಸಿದ್ಧವಂತೆ.

ಇದರಿಂದಸಿಧು ಅವರ ಸಂಘಟನೆ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಶಿರೋಮಣಿ ಅಕಾಲಿ ದಳಹಾಗೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟವಾಗಿದೆ. ಸಿಧು ಪತ್ನಿ ಹಾಗೂ ಹಾಲಿ ಬಿಜೆಪಿ ಶಾಸಕಿ ಡಾ. ನವಜೋತ್ ಕೌರ್ ಸಿಧು ಕೂಡ ಬಿಜೆಪಿಯೊಂದಿಗೆ ಯಾವುದೇ ರೀತಿಯ ಮೈತ್ರಿಯಿಲ್ಲವೆಂದಿದ್ದಾರೆ.
ಇತ್ತೀಚೆಗೆ ಬಿಜೆಪಿಗೆ ರಾಜೀನಾಮೆ ನೀಡಿದ್ದ ಸಿಧು, ತಮ್ಮ ಹೇಳಿಕೆಯಲ್ಲಿ ಹೀಗೆಂದು ಹೇಳಿದ್ದಾರೆ . ‘‘ಕಳೆದ 15 ವರ್ಷಳಿಂದ ಪಂಜಾಬನ್ನು ಲೂಟಿಗೈದಿರುವ ಬಾದಲ್-ಅಮರಿಂದರ್ ಹೊಂದಾಣಿಕೆಗೆ ಸಹಾಯ ಮಾಡುವಂತಹ ಆಡಳಿತ ವಿರೋಧಿ ಮತ ಬ್ಯಾಂಕನ್ನು ನಾವು ವಿಭಜಿಸುವುದಿಲ್ಲ. ಹಾಗೇನಾದರೂ ನಾವು ಮಾಡಿದಲ್ಲಿಪಂಜಾಬ್ ರಾಜ್ಯದಕಲ್ಯಾಣಕ್ಕಾಗಿ ಬದಲಾವಣೆ ತರಬೇಕೆಂದಿರುವ ನಮ್ಮ ಉದ್ದೇಶ ವಿಫಲವಾದಂತೆ.’’
‘‘ಯಶಸ್ಸು ರಾತ್ರಿ ಬೆಳಗಾಗುವುದರೊಳಗಾಗಿ ಬರುವುದಿಲ್ಲ. ಹೊಸ ಪಕ್ಷವೊಂದು ಜಯ ಸಾದಿಸಲು ಕನಿಷ್ಠ ಎಡು ವರ್ಷ ಬೇಕು.ಇಂತಹ ಒಂದು ದೊಡ್ಡ ಕಾಂರ್ುಕ್ಕೆ ಮೂರು ತಿಂಗಳು ಸಾಕಾಗದು’’ ಎಂದಿದ್ದಾರೆ.
ಅತ್ತ ತಮ್ಮ ಪತಿ ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಸಾಧಿಸಲು ಸಿದ್ಧವಿದೆ, ಎಂದು ಡಾ. ನವಜೋತ್ ಕೌರ್ ಸಿಧು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News