ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರ ಇಲ್ಲದಿದ್ದರೆ ಅದನ್ನು ಆಗ ನಿಷೇಧಿಸಿದ್ದು ಏಕೆ ?
ನವದೆಹಲಿ, ಸೆ.22: ‘‘ಮಹಾತ್ಮ ಗಾಂಧೀಜಿ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರವಿಲ್ಲದೇ ಹೋಗಿರುತ್ತಿದ್ದರೆ, ಘಟನೆ ನಡೆದ ಕೂಡಲೇ ಸಂಘಟನೆಯನ್ನು ಏಕೆ ನಿಷೇಧಿಸಲಾಗಿತ್ತು? ಈ ಬಗ್ಗೆ ನೀಡಲಾಗಿದ್ದ ಆದೇಶದಲ್ಲೂ ನಿಷೇಧಕ್ಕೆ ಕಾರಣಗಳನ್ನು ನೀಡಲಾಗಿತ್ತು. ಗಾಂಧೀಜಿ ಹತ್ಯೆಯ ನಂತರ ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾ ಸಿಹಿತಿಂಡಿ ಹಂಚಿತ್ತು’’ ಎಂದು ನೆಹರೂ ಮೆಮೋರಿಯಲ್ ಮ್ಯುಸಿಯಂ ಎಂಡ್ ಲೈಬ್ರೆರಿ ಇದರ ಮಾಜಿ ನಿರ್ದೇಶಕಿಮೃದುಲಾ ಮುಖರ್ಜಿ ಹೇಳಿದ್ದಾರೆ.
‘‘ಆರೆಸ್ಸೆಸ್, ಸ್ಕೂಲ್ ಟೆಕ್ಟ್ಸ್ ಎಂಡ್ ದಿ ಮರ್ಡರ್ ಆಫ್ ಮಹಾತ್ಮ ಗಾಂಧಿ : ದಿ ಹಿಂದೂ ಕಮ್ಯೂನಲ್ ಪ್ರಾಜೆಕ್’’ ಎಂಬ ಕೃತಿಯ ಲೇಖಕಿಯೂ ಜೆನ್‌ಯು ಇಲ್ಲಿನ ಮಾಜಿ ಇತಿಹಾಸ ಪ್ರೊಫೆಸರ್ ಕೂಡಆಗಿರುವ ಮೃದುಲಾ ಮುಖರ್ಜಿ, ಗವರ್ನೆನ್ಸ್ ನೌ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ‘‘ಆರೆಸ್ಸೆಸ್ ದೇಶದಲ್ಲಿ ದ್ವೇಷ ಹಾಗೂ ಹಿಂಸಾತ್ಮಕ ವಾತಾವರಣ ಸೃಷ್ಟಿಸಿದ್ದರಿಂದಲೇ ಗಾಂಧೀಜಿ ಹತ್ಯೆನಡೆದಿತ್ತು’’ ಎಂದಿದ್ದಾರೆ. ‘‘ಸ್ವಾತಂತ್ರ್ಯೋತ್ತರ ದಂಗೆಗಳಲ್ಲಿ ಆರೆಸ್ಸೆಸ್ ಸಂಘಟನೆಯ ಹಲವು ಸದಸ್ಯರು ಭಾಗವಹಿಸಿದ್ದರ ಬಗ್ಗೆ ಸರಕಾರಕ್ಕೂಸಾಕಷ್ಟು ಮಾಹಿತಿ ಲಭಿಸಿತ್ತು’’ ಎಂದು ಅವರು ನುಡಿದಿದ್ದಾರೆ.
‘‘ಜನವರಿ 1948ರಲ್ಲಿ ಗಾಂಧೀಜಿ ಹತ್ಯೆಯಾದಾಗ ಸಾವರ್ಕರ್ ಈ ಸಂಚಿನ ಸೂತ್ರಧಾರಿಯೆಂದು ಶಂಕಿಸಿ ಅವರನ್ನು ಬಂಧಿಸಲಾಗಿತ್ತು.ಆದರೆ ವಿಚಾರಣೆ ಸಂದರ್ಭ ಅವರ ವಿರುದ್ಧ ಸಾಕ್ಷ್ಯದ ಕೊರತೆಯಿಂದಾಗಿ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿತ್ತು. ಉತ್ತಮ ಕ್ರಿಮಿಲ್ ವಕೀಲರಾಗಿದ್ದ ಸರ್ದಾರ್ ಪಟೇಲ್ಅವರಿಗೆ ಸಾವರ್ಕರ್ ದೋಷಿಯೆಂದು ತಿಳಿದಿದ್ದ ಕಾರಣದಿಂದಲೇ ಅವರನ್ನು ವಿಚಾರಣೆಗೆ ಗುರಿಪಡಿಸಲು ಅನುಮತಿಸಿದ್ದರು. ‘‘ಸಾವರ್ಕರ್‌ಅವರ ನೇತೃತ್ವದಲ್ಲಿ ಹಿಂದೂ ಮಹಾಸಭಾದ ಮತಾಂಧ ಗುಂಪೊಂದುಈ ಸಂಚನ್ನು ರೂಪಿಸಿತ್ತು’ ಎಂದು ಪಟೇಲ್ ನೆಹರೂ ಅವರಿಗೆ ಹೆೇಳಿದ್ದರು’’ ಎಂದೂ ಮೃದುಲಾ ಮುಖರ್ಜಿ ಹೇಳಿದ್ದಾರೆ.
‘‘ನ್ಯಾಯಾಲಯದ ವಿಚಾರಣೆ ವೇಳೆ ಸಾವರ್ಕರ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ದೊರೆಯದೇ ಇದ್ದರೂ ಮುಂದೆ ಕಪೂರ್ ಆಯೋಗ ನೇಮಿಸಲ್ಪಟ್ಟಾಗ ಸಾವರ್ಕರ್ ಅವರ ಇಬ್ಬರು ಆತ್ಮೀಯ ಸಹವರ್ತಿಗಳಾದ ಎ.ಪಿ.ಕಸರ್ ಹಾಗೂ ಜಿ.ವಿ.ದಾಮ್ಲೆವಿಚಾರಣೆಗೆ ಹಾಜರಾಗಿದ್ದರು. ಆದರೆ ಅದಾಗಲೇ ಸಾವರ್ಕರ್ ಮೃತಪಟ್ಟಿದ್ದರು. ಅವರು ತಮ್ಮ ಹೇಳಿಕೆಯನ್ನು ನ್ಯಾಯಾಲಯ ವಿಚಾರಣೆ ವೇಲೆ ಹೇಳಿದ್ದಿದ್ದರೆ ಸಾವರ್ಕರ್ ತಪ್ಪಿತಸ್ಥರೆಂದು ಸಾಬೀತಾಗುತ್ತಿತ್ತು’’ ಎಂದು ಮೃದುಲಾ ಹೇಳಿಕೊಂಡಿದ್ದಾರೆ.
‘‘ನಾಥೂರಾಂ ಗೋಡ್ಸೆ ಯಾವತ್ತೂ ಆರೆಸ್ಸೆಸ್ ಜತೆಗಿದ್ದರು ಹಾಗೂ ಆರೆಸ್ಸೆಸ್ ತೊರೆದೇ ಇಲ್ಲ ಎಂದು ಆತನ ಸಹೋದರ ಗೋಪಾಲ್ ಗೋಡ್ಸೆ ಹೇಳಿದ್ದರು’’ ಎಂದು ಮೃದುಲಾ ಹೇಳಿದರು.
ಹಿಂದುತ್ವವಾದಿಗಳು ಗಾಂಧೀಜಿಯ ವಿರುದ್ಧವೇಕಿದ್ದರೆಂಬ ಪ್ರಶ್ನೆಗೆ ಉತ್ತರಿಸಿದ ಅವರು ಗಾಂಧೀಜಿ ಮುಸ್ಲಿಮರ ಪರವೆಂಬ ಭಾವನೆಯಿತ್ತು, ಮೇಲಾಗಿ ರಾಮರಾಜ್ಯವೆಂದೇ ಬಣ್ಣಿಸಲಾದ ಗಾಂಧೀಜಿಯ ಸ್ವರಾಜ್ಯ ಚಿಂತನೆಹಿಂದೂ ರಾಜ್ಸ್ಥಾಪಿಸಬೇಕೆಂದಿರುವವರ ಉದ್ದೇಶಕ್ಕೆ ಅಡ್ಡಿಯಾಗಿದ್ದೇಕಾರಣವಿರಬಹುದೆಂದು ಅವರು ಅಭಿಪ್ರಾಯಪಟ್ಟರು.