ಸಮುದ್ರದಲ್ಲಿ ಮುಳುಗಿದ ಬೋಟ್
Update: 2016-09-22 14:44 IST
ಕೈರೋ, ಸೆ.22: ಈಜಿಪ್ಟ್‌ನ ಉತ್ತರ ಕರಾವಳಿಯ ಮೆಡಿಟರೇನಿಯನ್ ಸಮುದ್ರದಲ್ಲಿ ಬುಧವಾರ ವಲಸಿಗರು ಪ್ರಯಾಣಿಸುತ್ತಿದ್ದ ಬೋಟ್‌ವೊಂದು ಮುಳುಗಿದ ಪರಿಣಾಮ ಕನಿಷ್ಠ 42 ಮಂದಿ ಸಾವನ್ನಪ್ಪಿದ್ದು, 150 ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ.
400ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. ಮಿತಿಗಿಂತ ಹೆಚ್ಚು ಜನರು ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಬೋಟ್ ಮುಳುಗಿದೆ ಎನ್ನಲಾಗಿದೆ. ಬೋಟ್‌ನಲ್ಲಿ ಈಜಿಪ್ಟ್, ಸುಡಾನ್, ಸೊಮಾಲಿಯದ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಎಲ್ಲ ವ್ಯವಸ್ಥೆಗೆ ಸೂಚಿಸಲಾಗಿದೆ. ದುರ್ಘಟನೆಗೆ ಕಾರಣವಾದವರನ್ನು ಶಿಕ್ಷಿಸಲಾಗುತ್ತದೆ ಎಂದು ಈಜಿಪ್ಟ್ ಪ್ರಧಾನಮಂತ್ರಿ ಶೆರಿಫ್ ಇಸ್ಮಾಯಿಲ್ ತಿಳಿಸಿದ್ದಾರೆ.