ವಿಎಸ್ ಅಚ್ಯುತಾನಂದ್‌ರ ವಿನಂತಿ ನಿರಾಕರಿಸಿದ ಪಿಣರಾಯಿ ಸರಕಾರ
ತಿರುವನಂತಪುರಂ, ಸೆ.22: ಸೆಕ್ರಟರಿಯೇಟ್ ಅನಕ್ಸ್‌ನಲ್ಲಿ ಅಲ್ಲವಾದರೆ ಸೆಕ್ರಟರಿಯೇಟನ್‌ನಲ್ಲಿ ಆಡಳಿತ ಸುಧಾರಣಾ ಆಯೋಗದ ಕಚೇರಿ ಒದಗಿಸಬೇಕೆಂದು ವಿಎಸ್ ಅಚ್ಯುತಾನಂದನ್‌ರ ಬೇಡಿಕೆ ಸದ್ಯ ಪೂರೈಕೆಯಾಗಿಲ್ಲ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಎಸ್ ಅಚ್ಯುತಾನಂದನ್‌ರಿಗೆ ಬರ್ಟನ್ ಹಿಲ್ ಐಎಂಜಿ ಸಮುಚ್ಚಯದಲ್ಲಿ ಕಚೇರಿಯನ್ನು ಒದಗಿಸಲಾಗಿದೆ ಎಂದು ವರದಿಯಾಗಿದೆ.
ಸರಕಾರ ತನಗೆ ಬರ್ಟನ್ ಹಿಲ್‌ನಲ್ಲಿ ಕಚೇರಿ ನೀಡುವುದನ್ನು ಮತ್ತು ಸೆಕ್ರಟರಿಯೇಟ್ ಸಮುಚ್ಚಯದಿಂದ ತನ್ನನ್ನು ದೂರವಿಡುವ ಸರಕಾರದ ನಿರ್ಧಾರದ ಬಗ್ಗೆ ವಿಎಸ್ ಈ ಹಿಂದೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರೂ ಸರಕಾರ ಅದನ್ನು ಕಡೆಗಣಿಸಿದೆ.
ಕಳೆದ ಜನವರಿಯಲ್ಲಿ ಬರ್ಟನ್ ಹಿಲ್ ಬಂಗ್ಲೆಗೆ ಪಾರಂಪರಿಕ ಬಂಗ್ಲೆ ಎಂಬ ಪದವಿ ಪ್ರದಾನ ಸಮಾರಂಭದಲ್ಲಿ ಅಂದಿನ ವಿಪಕ್ಷ ನಾಯಕರಾಗಿದ್ದ ವಿಎಸ್ ಅಚ್ಯುತಾನಂದನ್ ಭಾಗವಹಿಸಿದ್ದರು. ಜೊತೆಗೆ ಎಕ್ಸಿಕ್ಯೂಟಿವ್ ಹಾಸ್ಟೆಲ್‌ನ್ನು ಕೂಡಾ ಉದ್ಘಾಟಿಸಿದ್ದರು.
ತರಬೇತಿಗೆ ಬರುವ ಅಧಿಕಾರಿಗಳಿಗಾಗಿ ಇದನ್ನು ಬಳಸಲು ತೀರ್ಮಾನಿಸಲಾಗಿತ್ತು. ಇದೀಗ ಅಚ್ಯುತಾನಂದನ್‌ರಿಗೆ ಇಲ್ಲಿಯ ಕಚೇರಿ ದೊರಕಿದೆ. ಆದರೆ ಅವರು ಕೇಳಿದ್ದ ಕವಡಿಯಾರ್ ಹೌಸ್‌ನ್ನು ಅಧಿಕೃತ ವಸತಿಯಾಗಿ ವಿಎಸ್‌ರಿಗೆ ಕೇರಳ ಸರಕಾರ ನೀಡಿದೆ ಎಂದು ವರದಿ ತಿಳಿಸಿದೆ.