×
Ad

ಬಡ ರೋಗಿಗಳನ್ನು ಮೃಗಗಳಂತೆ ನಡೆಸಿಕೊಂಡ ಸರಕಾರೀ ಆಸ್ಪತ್ರೆ ಸಿಬ್ಬಂದಿ !

Update: 2016-09-23 15:36 IST

ರಾಂಚಿ, ಸೆಪ್ಟಂಬರ್ 23: ಜಾರ್ಖಂಡ್‌ನ ಅತಿದೊಡ್ಡ ಸರಿಕಾರಿ ಆಸ್ಪತ್ರೆ ರಿಮ್ಸ್‌ನಲ್ಲಿ ಬಡರೋಗಿಗಳೊಂದಿಗೆ ಮೃಗೀಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಬಡಮಹಿಳಾ ರೋಗಿಯೊಬ್ಬರಿಗೆ ಅಡಿಗೆ ಸಿಬ್ಬಂದಿಗಳು ನೆಲದಲ್ಲಿಯೇ ಅನ್ನ, ಸಾಂಬಾರು(ದಾಲ್ ಚಾವಲ್) ಬಡಿಸಿ ತಿನ್ನುವಂತೆ ಮಾಡಿ ಹೀನಾಯವಾಗಿ ವರ್ತಿಸಿದ್ದಾರೆ. ವರದಿಯಾಗಿರುವ ಪ್ರಕಾರ,ಮಹಿಳಾರೋಗಿ ಪಲಮತಿ ಎಂಬವರು ಊಟಕೇಳಿದಾಗ ಆಸ್ಪತ್ರೆಯ ಅಡಿಗೆ ಸಿಬ್ಬಂದಿಗಳು ಮೊದಲು ಬೈದು ಆನಂತರ ಕಾರಿಡಾರ್‌ನ ನೆಲದಲ್ಲಿ ಅನ್ನಬಡಿಸಿದ್ದಾರೆ ಎನ್ನಲಾಗಿದೆ.

ಇಲ್ಲಿ 300ಕೋಟಿರೂ. ಖರ್ಚಾಗುತ್ತಿದೆ:

ಬಡಮಹಿಳೆಯಬಳಿ ಅನ್ನ ಪಡೆಯಲು ಯಾವುದೇ ಪಾತ್ರೆ ಇರಲಿಲ್ಲ. ಅದಕ್ಕಾಗಿ ನೆಲದಲ್ಲಿ ಅನ್ನ ಬಡಿಸಿಹೋಗಿದ್ದಾರೆ. ನಂತರ ಈ ಮಹಿಳೆಯಿಂದಲೇ ನೆಲವನ್ನೂ ಒರೆಸುವಂತೆ ಮಾಡಿದ್ದಾರೆ. ಇದು ಮಹಿಳೆಯ ದಯನೀಯ ಸ್ಥಿತಿಯಲ್ಲ. ಬದಲಾಗಿ ಇಷ್ಟು ದೊಡ್ಡ ಆಸ್ಪತ್ರೆಯಲ್ಲಿರುವ ಕೆಟ್ಟ ವ್ಯವಸ್ಥೆಯನ್ನು ಬಹಿರಂಗಪಡಿಸುತ್ತಿದೆ. ಇಷ್ಟುದೊಡ್ಡ ಆಸ್ಪತ್ರೆಯಲ್ಲಿ ಈ ಮಹಿಳೆಗೆ ಕೊಡಲು ಒಂದುಪಾತ್ರೆ ಇರಲಿಲ್ಲವೇ ಎಂಬ ಪ್ರಶ್ನೆ ಈಗ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಸರಕಾರ ಈ ಆಸ್ಪತ್ರೆಗೆ ಪ್ರತಿವರ್ಷವೂ ಸುಮಾರು 300ಕೋಟಿ ರೂಪಾಯಿ ಖರ್ಚುಮಾಡುತ್ತಿದೆ. ಹೊಳೆಯುವ ಕಟ್ಟಡಗಳನ್ನು ಕೂಡಾ ಕಟ್ಟಿಸಿಕೊಡುತ್ತಿದೆ. ಕೋಟ್ಯಂತರ ರೂಪಾಯಿಯ ಆಸ್ಪತ್ರೆಗೆ ಆವಶ್ಯಕವಾದ ಯಂತ್ರಗಳನ್ನು ತರಿಸಿಕೊಡುತ್ತಿದೆ. ಹೀಗಿದ್ದರೂ ಇಂತಹ ಘಟನೆಗಳು ರಿಮ್ಸ್ ಆಸ್ಪತ್ರೆಯ ಮ್ಯಾನೇಜ್‌ಮೆಂಟ್‌ನ ಲೋಪಗಳನ್ನು ಎತ್ತಿಹಿಡಿಯುತ್ತಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News